ಗಾಲ್ಫ್‌: ಸುನಿಲ್‌ಗೆ ಪ್ರಶಸ್ತಿ ಬೆಂಗಳೂರು: ಎಸ್‌.ಸುನಿಲ್‌ ಅವರು ಬೆಂಗಳೂರು ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಕರ್ನಾಟಕ ಓಪನ್‌ ಅಮೆಚೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆದರು. ಎರಡು ಸುತ್ತುಗಳ ಸ್ಪರ್ಧೆಯನ್ನು ಅವರು 130 ಸ್ಟ್ರೋಕ್‌ಗಳೊಂದಿಗೆ (62+68) ಕೊನೆಗೊಳಿಸಿದರು. ಎಂ.ದಿಲೀಪ್‌ (131 ಸ್ಟ್ರೋಕ್‌) ರನ್ನರ್‌ ಅಪ್‌ ಆದರು. ಮಹಿಳೆಯರ ವಿಭಾಗದಲ್ಲಿ ಪ್ರೇಮಾ ಪ್ರಸಾದ್ (122) ಅವರು ‘ನೆಟ್‌ ವಿನ್ನರ್‌’ ಎನಿಸಿಕೊಂಡರೆ, ಲತಾ ಶಿವಣ್ಣ (147) ಅವರು ‘ಗ್ರಾಸ್‌ ವಿನ್ನರ್‌’ ಆದರು. ಇತರ ವಿಭಾಗಗಳ ಫಲಿತಾಂಶ: ಹ್ಯಾಂಡಿಕ್ಯಾಪ್ 0–9: ನವೀನ್‌ ವಾಹ್ಲ್ (118)–1, ರಮೇಶ್‌ ಮೌಳಿ (126)–2 10–18: ನಿರಂಜನ್‌ ರಾಮಲಿಂಗಂ (123) –1, ಎಂ.ವಿ.ಜಗನ್ನಥ್ (124) –2 19–24: ಆಕಾಶ್‌ ಮಿತ್ತಲ್ (124) –1, ಕೆ.ಶ್ರೀನಿವಾಸನ್ (126) –2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.