ಬ್ಯಾಸ್ಕೆಟ್‌ಬಾಲ್: ಡಿವೈಇಎಸ್‌ಗೆ ಜಯ ಬೆಂಗಳೂರು: ಡಿವೈಇಎಸ್‌ ಬೆಂಗಳೂರು ತಂಡ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ 79–52 ರಿಂದ ಬಿಎಸ್‌ಎನ್‌ಎಲ್‌ ತಂಡವನ್ನು ಮಣಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 19 ಪಾಯಿಂಟ್ಸ್‌ ಗಳಿಸಿದ ಮನೋಜ್‌ ಅವರು ಡಿವೈಇಎಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಕ್ಷಿತ್‌ 14 ಪಾಯಿಂಟ್ಸ್ ತಂದಿತ್ತರು. ಭಾರತ್‌ ಎಸ್‌.ಯು 61–45 ರಿಂದ ಐಬಿಬಿಸಿ ವಿರುದ್ಧ ಗೆದ್ದಿತು. ಸಂಜಯ್‌ (18) ಮತ್ತು ಅಕ್ಷಯ್ (15) ಅವರು ಗೆಲುವಿಗೆ ನೆರವಾದರು. ಇನ್ನೊಂದು ಪಂದ್ಯದಲ್ಲಿ ಎಂಎನ್‌ಕೆ ರಾವ್ ಪಾರ್ಕ್‌ ಬಿ.ಸಿ ತಂಡ 67–65 ರಿಂದ ಬೀಗಲ್ಸ್‌ ಕ್ಲಬ್‌ ತಂಡವನ್ನು ಸೋಲಿಸಿತು. ವಿಜಯಿ ತಂಡದ ಪರ ಶ್ರೇಯಸ್‌ (17) ಮಿಂಚಿದರೆ, ಎದುರಾಳಿ ತಂಡದ ಅಚಿಂತ್ಯಾ 25 ಪಾಯಿಂಟ್ಸ್ ಕಲೆಹಾಕಿ ಗಮನ ಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.