ಚೆಸ್‌: ದಿವ್ಯಾ ಯಶಸ್ಸಿನ ಓಟ ಕೋಲ್ಕತ್ತ: ಭಾರತದ ವಿಮೆನ್‌ ಗ್ರ್ಯಾಂಡ್‌ಮಾಸ್ಟರ್‌ ದಿವ್ಯಾ ದೇಶಮುಖ್ ಟಾಟಾ ಸ್ಟೀಲ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಆಡಿದ ಮೂರೂ ಪಂದ್ಯಗಳಲ್ಲಿ ಜಯಶಾಲಿಯಾಗಿದ್ದಾರೆ. ಅವರು ಒಟ್ಟಾರೆ ಐದೂವರೆ ಪಾಯಿಂಟ್ಸ್‌ ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದಾರೆ. ಚೀನಾ ಜು ವೆನ್‌ಜುನ್‌ (4 ಪಾಯಿಂಟ್ಸ್‌) 2ನೇ ಸ್ಥಾನದಲ್ಲಿದ್ದಾರೆ. ರಷ್ಯಾದ ಆಟಗಾರ್ತಿ ಪೊಲಿನಾ ಶುವಲೋವಾ 3ನೇ ಸ್ಥಾನದಲ್ಲಿದ್ದಾರೆ. ದಿನದ ತಮ್ಮ ಮೂರನೇ ಪಂದ್ಯದಲ್ಲಿ ದಿವ್ಯಾ, ವಂತಿಕಾ ಅಗರವಾಲ್ ವಿರುದ್ಧ ಜಯಗಳಿಸಿದರು. ಭಾರತದ ಅಗ್ರಮಾನ್ಯ ಆಟಗಾರ್ತಿಯಾಗಿರುವ ಗ್ರ್ಯಾಂಡ್‌ಮಾಸ್ಟರ್‌ ಕೊನೇರು ಹಂಪಿ, ಜಾರ್ಜಿಯಾದ ನಿನೊ ಬಾಟ್ಸಿಯಾಶ್ವಿಲಿ ಅವರನ್ನು ಸೋಲಿಸುವ ಮೂಲಕ ಕೊನೆಗೂ ತಮ್ಮ ಮೊದಲ ಜಯ ದಾಖಲಿಸಿದರು. ದ್ರೋಣವಲ್ಲಿ ಹಾರಿಕಾ ಅವರು ಚೀನಾದ ವೆನ್‌ಜುನ್‌ ಅವರ ಎದುರು ಡ್ರಾ ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.