ಟಿಟಿ: ತೆಶುಬ್‌, ಹಿಯಾ ಚಾಂಪಿಯನ್‌ ಬೆಂಗಳೂರು: ತೆಶುಬ್ ದಿನೇಶ್ ಮತ್ತು ಹಿಯಾ ಸಿಂಗ್ ಅವರು ಬೆಳಗಾವಿ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 3ನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಟೂರ್ನಿಯ ಮೂರನೇ ದಿನವಾದ ಶನಿವಾರ ಬಾಲಕರ ಫೈನಲ್‌ ಪಂದ್ಯದಲ್ಲಿ ತೆಶುಬ್ 11-5, 11-5, 11-7 ರಿಂದ ಆರ್ಯ ಎ. ಜೈನ್‌ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ತೆಶುಬ್‌ ಅವರು ಎನ್‌. ಅರ್ನವ್‌ ಅವರನ್ನು, ಆರ್ಯ ಅವರು ಗೌರವ್‌ ಗೌಡ ಅವರನ್ನು ಸೋಲಿಸಿದ್ದರು. ಬಾಲಕಿಯರ ಫೈನಲ್‌ ಪಂದ್ಯದಲ್ಲಿ ಹಿಯಾ ಸಿಂಗ್‌ 11-8, 11-8, 12-10 ರಿಂದ ಹಿಮಾಂಶಿ ಚೌಧರಿ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ ಪಂದ್ಯದಲ್ಲಿ ಹಿಮಾಂಶಿ ಅವರು ಆಯುಷಿ ಬಿ. ಗೋಡ್ಸೆ ಅವರನ್ನು, ಹಿಯಾ ಅವರು ಸುಮೇಧಾ ಕೆ.ಎಸ್‌. ಭಟ್‌ ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.