ಟಿಟಿ: ರೆಯಾನ್ಶ್, ತನಿಷ್ಕಾ ಚಾಂಪಿಯನ್‌ ಬೆಂಗಳೂರು: ರೆಯಾನ್ಶ್‌ ಜಲನ್‌ ಮತ್ತು ತನಿಷ್ಕಾ ಕಪಿಲ್‌ ಕಾಲಭೈರವ್ ಅವರು ಬೆಳಗಾವಿಯಲ್ಲಿ ಕೊನೆಗೊಂಡ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್‌ ಆದರು. ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ರೆಯಾನ್ಶ್ 11–9, 11–7, 12–10 ರಿಂದ ವೇದಾಂತ್ ವಶಿಷ್ಠ ವಿರುದ್ಧ ಗೆದ್ದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ತನಿಷ್ಕಾ 11–6, 11–4, 11–3 ರಿಂದ ರಾಶಿ ವಿ.ರಾವ್‌ ಅವರನ್ನು ಮಣಿಸಿದರು. ಬಾಲಕರ ಹೋಪ್ಸ್‌ ವಿಭಾಗದ ಫೈನಲ್‌ನಲ್ಲಿ ಸುದರ್ಶನ್‌ ಎ.ರಾಜ್ 7–11, 11–6, 11–8, 8–11, 11–7 ರಿಂದ ಎಂ.ಸಿದ್ಧಾಂತ್‌ ಅವರನ್ನು ಮಣಿಸಿದರೆ, ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಮಿಹಿಕಾ ಆರ್‌.ಉಡುಪ 11–8, 11–3, 10–12, 12–10 ರಿಂದ ಎಸ್‌.ರಚಿತಾ ವಿರುದ್ಧ ಗೆದ್ದರು. ನಾನ್‌ ಮೆಡಲಿಸ್ಟ್‌ ವಿಭಾಗದಲ್ಲಿ ತೇಜಸ್‌ ಜವೂರ್ 11–9, 11–6, 11–9 ರಿಂದ ಆಯುಷ್‌ ಬಿ. ಗೋಡ್ಸೆ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.