ಭಾರತ ಬಾಕ್ಸಿಂಗ್‌ ತಂಡಕ್ಕೆ ಚೀನಾದಲ್ಲಿ ತರಬೇತಿ ನವದೆಹಲಿ: ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಬಾಕ್ಸರ್‌ಗಳು ಚೀನಾದ ವುಯಿಶಾನ್‌ ನಗರದಲ್ಲಿ 17 ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. 13 ಬಾಕ್ಸರ್‌ಗಳು ಮತ್ತು 11 ಕೋಚಿಂಗ್‌ ಸಿಬ್ಬಂದಿಯನ್ನು ಒಳಗೊಂಡ ಭಾರತ ತಂಡ ಭಾನುವಾರ ಚೀನಾಕ್ಕೆ ಪ್ರಯಾಣಿಸಿದೆ ಎಂದು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ತನ್ನ ‘ಎಕ್ಸ್‌’ ಖಾತೆಯಲ್ಲಿ ತಿಳಿಸಿದೆ. ತರಬೇತಿ ಶಿಬಿರ ಸೆ.20ರ ವರೆಗೆ ಮುಂದುವರಿಯಲಿದೆ. ತಂಡವು ಅಲ್ಲಿಂದ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಹಾಂಗ್‌ಝೌಗೆ ತೆರಳಲಿದೆ. ಭಾರತ ತಂಡ: ಪುರುಷರು: ದೀಪಕ್ (51ಕೆ.ಜಿ), ಸಚಿನ್ (57 ಕೆ.ಜಿ), ಶಿವ ಥಾಪಾ (63.5 ಕೆ.ಜಿ), ನಿಶಾಂತ್‌ ದೇವ್ (71 ಕೆ.ಜಿ), ಲಕ್ಷ್ಯ ಚಾಹರ್ (80 ಕೆ.ಜಿ), ಸಂಜೀತ್ (92 ಕೆ.ಜಿ) ಮತ್ತು ನರೇಂದರ್‌ (+92 ಕೆ.ಜಿ). ಮಹಿಳೆಯರು: ನಿಖತ್‌ ಜರೀನ್ (50 ಕೆ.ಜಿ), ಪ್ರೀತಿ (54 ಕೆ.ಜಿ), ಪರ್ವೀನ್ (57 ಕೆ.ಜಿ), ಜಾಸ್ಮಿನ್ (60 ಕೆ.ಜಿ), ಅರುಂಧತಿ ಚೌಧರಿ (66 ಕೆ.ಜಿ) ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.