ವಿಡಿಯೊ: ಚೆಸ್ ಪ್ರತಿಭೆ ಆರ್‌.ಪ್ರಜ್ಞಾನಂದಗೆ ಚೆನ್ನೈ ಶಾಲೆ ವತಿಯಿಂದ ಭವ್ಯ ಸ್ವಾಗತ ಚೆನ್ನೈ: ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಆಗಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರನ್ನು ಹಾಗೂ ಅವರ ತಾಯಿ ನಾಗಲಕ್ಷ್ಮೀ ಅವರನ್ನು ಚೆನ್ನೈನ ವೆಲಮ್ಮಾಲ್ ಶಾಲೆ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಾಗಲಕ್ಷ್ಮೀ ಹಾಗೂ ಪ್ರಜ್ಞಾನಂದ ಅವರನ್ನು ಅಲಂಕೃತ ಸಾರೋಟಿನಲ್ಲಿ ಕರೆದೋಯ್ದರು. ಈ ವೇಳೆ ಪ್ರಜ್ಞಾನಂದ ಅವರೇ ಸಾರೋಟು ಓಡಿಸಿದರು. ಈ ಕುರಿತ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ Xನಲ್ಲಿ ಹಂಚಿಕೊಂಡಿದೆ.‌ 18 ವರ್ಷದ ಪ್ರಜ್ಞಾನಂದ ವೆಲಮ್ಮಾಲ್ ಶಾಲೆಯ ವಿದ್ಯಾರ್ಥಿಯಾಗಿದ್ದು ಶಾಲೆ ಸಮವಸ್ತ್ರದಲ್ಲೇ ಬಂದು ಅವರು ಸನ್ಮಾನಿತರಾದರು. ಶಾಲೆ ವತಿಯಿಂದ ₹ 10 ಲಕ್ಷ ಬಹುಮಾನ ನೀಡಲಾಗಿದೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪ್ರಜ್ಞಾನಂದ ಅವರು ಫೈನಲ್‌ನಲ್ಲಿ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್ ವಿರುದ್ಧ ಟೈಬ್ರೇಕ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು # | , : 2023 - ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.