ರಾಜ್ಯಮಟ್ಟದ ಅಥ್ಲೆಟಿಕ್ಸ್: ಅಭಿನ್‌, ಕೀರ್ತನಾಗೆ ಅಗ್ರಸ್ಥಾನ ಬೆಂಗಳೂರು: ಉಡುಪಿಯ ಅಭಿನ್‌ ಬಿ. ದೇವಾಡಿಗ ಮತ್ತು ಕೀರ್ತನಾ ಅವರು ಇಲ್ಲಿ ಆರಂಭವಾದ ರಾಜ್ಯಮಟ್ಟದ ಅಥ್ಲೆಟಿಕ್‌ ಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 200 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದರು. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಅಭಿನ್‌ 20.90 ಸೆ.ಗಳಲ್ಲಿ ಗುರಿ ತಲುಪಿದರು. ಮಹಿಳೆಯರ ವಿಭಾಗದಲ್ಲಿ ಕೀರ್ತನಾ 24.68 ಸೆ.ಗಳೊಂದಿಗೆ ಮೊದಲಿಗರಾದರು. ಮೊದಲ ದಿನದ ಫಲಿತಾಂಶ: ಪುರುಷರ ವಿಭಾಗ: 200 ಮೀ. ಓಟ: ಅಭಿನ್‌ ಬಿ. ದೇವಾಡಿಗ (ಉಡುಪಿ; ಕಾಲ: 20.90 ಸೆ.)–1, ಬಾಲಕೃಷ್ಣ (ಹಾಸನ)–2, ತೀರ್ಥೇಶ್ ಎಚ್‌.ಪಿ.ಶೆಟ್ಟಿ (ದಕ್ಷಿಣ ಕನ್ನಡ)–3 400 ಮೀ. ಹರ್ಡಲ್ಸ್: ಎಂ.ಡಿ.ಅಮರನಾಥ್ (ಉಡುಪಿ; ಕಾಲ: 52.95 ಸೆ.)–1, ಆದೇಶ್‌ ಜಿ. ಹೆಗ್ಡೆ (ಬೆಂಗಳೂರು)–2, ಪ್ರಣಾಮ್‌ ಡಿ. ಶೆಟ್ಟಿ (ಉಡುಪಿ)–3 800 ಮೀ. ಓಟ: ತುಷಾರ್‌ ಬಿ.ಕೆ (ಬೆಂಗಳೂರು; ಕಾಲ: 1 ನಿ. 53.08 ಸೆ.)–1, ಕೆ.ಸೂರ್ಯ (ಡಿವೈಇಎಸ್‌ ಬೆಂಗಳೂರು)–2, ರಾಹುಲ್‌ ಚೌಧರಿ (ಮೈಸೂರು)–3 5,000 ಮೀ. ಓಟ: ಶಿವಾಜಿ ಪಿ.ಮಾದಪ್ಪ (ಉತ್ತರ ಕನ್ನಡ; ಕಾಲ: 14 ನಿ. 57.8 ಸೆ.)–1, ವೈಭವ್ ಮಾರುತಿ ಪಾಟೀಲ (ಡಿವೈಇಎಸ್‌ ಬೆಂಗಳೂರು)–2, ಗುರುಪ್ರಸಾದ್ (ಕೆಎಸ್‌ಪಿ)–3 ಡಿಸ್ಕಸ್‌ ಥ್ರೋ: ನಾಗೇಂದ್ರ ಅಣ್ಣಪ್ಪ ನಾಯ್ಕ್ (ಉತ್ತರ ಕನ್ನಡ; ದೂರ: 50.89 ಮೀ.)–1, ಮುಹಮ್ಮದ್‌ ಸಕ್ಲೈನ್‌ ಅಹ್ಮದ್ (ಮೈಸೂರು)–2, ಸಮಿತ್ (ಮಂಗಳೂರು)–3 ಲಾಂಗ್‌ಜಂಪ್: ಎಸ್‌.ಆರ್ಯ (ಬೆಂಗಳೂರು, ದೂರ: 7.86 ಮೀ.)–1, ಪುರುಷೋತ್ತಮ (ಹಾಸನ)–2, ರಾಧಾಕೃಷ್ಣನ್ (ಬೆಂಗಳೂರು)–3 ಶಾಟ್‌ಪಟ್‌: ರಾಹುಲ್‌ ಕಶ್ಯಪ್ (ಮೈಸೂರು: ದೂರ: 16.47 ಮೀ.)–1, ಪ್ರಜ್ವಲ್‌ ಎಂ.ಶೆಟ್ಟಿ–2, ಮನು (ಮೈಸೂರು)–3 ಮಹಿಳೆಯರ ವಿಭಾಗ: 200 ಮೀ. ಓಟ: ಕೀರ್ತನಾ (ಉಡುಪಿ; ಕಾಲ: 24.68 ಸೆ.)–1, ಸಿಮಿ ಎನ್‌.ಎಸ್‌. (ಉತ್ತರ ಕನ್ನಡ)–2, ಹರ್ಷಿಣಿ ಆರ್‌. (ಕೆಐಎಸ್‌ಸಿಇ ಬೆಂಗಳೂರು)–3 400 ಮೀ. ಹರ್ಡಲ್ಸ್: ದೀಕ್ಷಿತಾ ಆರ್‌.ಜಿ. (ಆಳ್ವಾಸ್‌; ಕಾಲ: 1 ನಿ. 02.3 ಸೆ.)–1, ಲಕ್ಷ್ಮಿ ಜಿ.ಎಂ. (ಫ್ಯೂಷನ್‌ ಕ್ಲಬ್)–2 800 ಮೀ. ಓಟ: ಅರ್ಪಿತಾ ಇ.ಬಿ. (ಫ್ಯೂಷನ್‌ ಅಥ್ಲೆಟಿಕ್‌ ಕ್ಲಬ್‌; ಕಾಲ: 2 ನಿ. 11.9 ಸೆ.)–1, ಉಷಾ ಆರ್‌. (ಮೈಸೂರು)–2, ದೀಪಾ ಶ್ರೀ (ಆಳ್ವಾಸ್‌)–3 5,000 ಮೀ. ಓಟ: ಚೈತ್ರಾ ದೇವಾಡಿಗ (ಆಳ್ವಾಸ್‌; ಕಾಲ: 17 ನಿ. 59 ಸೆ.)–1, ತೇಜಸ್ವಿ ಎನ್‌.ಎಲ್‌ (ಕೆೆಎಸ್‌ಪಿ)–2, ಎಚ್‌.ಎಂ.ಹರ್ಷಿತಾ (ಡಿವೈಇಎಸ್‌, ಬೆಂಗಳೂರು)–3 ಲಾಂಗ್‌ಜಂಪ್: ಶ್ರೀದೇವಿಕಾ ವಿ.ಎಸ್‌. (ಆಳ್ವಾಸ್‌; ದೂರ: 5.80 ಮೀ.)–1, ಭೂಮಿಕಾ ಕೆ.ಎನ್‌ (ಶಿವಮೊಗ್ಗ)–2, ಅಕ್ಷತಾ (ಧಾರವಾಡ)–3 ಹೈಜಂಪ್‌: ಪಲ್ಲವಿ ಪಾಟೀಲ (ಯಾದಗಿರಿ; ಎತ್ತರ: 1.60 ಮೀ.) ಡಿಸ್ಕಸ್‌ ಥ್ರೋ: ಕಲಾವತಿ ಬಸಪ್ಪ (ಎಕೆಎಎಫ್‌ ಬೆಂಗಳೂರು; ದೂರ: 40.96 ಮೀ.)–1, ಮಾಧುರ್ಯ (ಉಡುಪಿ)–2, ಸುಷ್ಮಾ ಎಂ.ಎನ್‌ (ಮೈಸೂರು)–3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.