ರಾಜ್ಯಮಟ್ಟದ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಶರಣ್‌ದೀಪ್, ಸ್ನೇಹಾ ವೇಗಿಗಳು ಬೆಂಗಳೂರು: ಕೆ.ಪಿ.ಶರಣ್‌ದೀಪ್ ಮತ್ತು ಎಸ್‌.ಎಸ್‌.ಸ್ನೇಹಾ ಅವರು ಇಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್‌ ಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ 100 ಮೀ. ಓಟದಲ್ಲಿ ಚಿನ್ನ ಗೆದ್ದು ‘ಕೂಟದ ವೇಗಿಗಳು’ ಗೌರವ ತಮ್ಮದಾಗಿಸಿಕೊಂಡರು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ 100 ಮೀ. ಓಟದಲ್ಲಿ ಶಿವಮೊಗ್ಗದ ಶರಣ್‌ದೀಪ್‌ 10.91 ಸೆ.ಗಳಲ್ಲಿ ಗುರಿ ತಲುಪಿದರು. ಎಸ್‌.ಶ್ರೇಯಸ್‌ (10.99 ಸೆ.) ಮತ್ತು ಸಿಜನ್‌ ಥಾಮಸ್ (11 ಸೆ.) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಸ್ನೇಹಾ 11.64 ಸೆ.ಗಳೊಂದಿಗೆ ಮೊದಲ ಸ್ಥಾನ ಪಡೆದರು. ಮೇಧಾ ಕಾಮತ್‌ (12.14 ಸೆ.) ಹಾಗೂ ಪಿ.ಜೆ.ಸ್ನೇಹಾ (12.16 ಸೆ.) ಬಳಿಕದ ಸ್ಥಾನ ತಮ್ಮದಾಗಿಸಿಕೊಂಡರು. ಇತರ ಫಲಿತಾಂಶ (ಚಿನ್ನ ಗೆದ್ದವರು): ಪುರುಷರ ವಿಭಾಗ: ಜಾವೆಲಿನ್‌ ಥ್ರೋ: ಶಾರುಖ್ ತಾರಿಹಾಳ (ಕೆಎಸ್‌ಪಿ; ದೂರ: 54.73 ಮೀ.), 400 ಮೀ.ಓಟ: ತೀರ್ಥೇಶ್‌ ಪಿ.ಶೇಟ್‌ (ದಕ್ಷಿಣ ಕನ್ನಡ; ಕಾಲ: 47.12 ಸೆ.), ಹ್ಯಾಮರ್‌ ಥ್ರೋ: ಸಚಿನ್‌ ಕೊಪ್ಪಳ್ (ದೂರ: 56.24 ಮೀ.), 10 ಸಾವಿರ ಮೀ. ಓಟ: ಶಿವಾಜಿ ಪಿ.ಮಾದಪ್ಪ (ಉತ್ತರ ಕನ್ನಡ; ಕಾಲ: 31 ನಿ. 30.9 ಸೆ.), ಟ್ರಿಪಲ್‌ ಜಂಪ್: ಮಹಾಂತ್‌ ಬಿ. (ಮಂಡ್ಯ; ದೂರ: 15.38 ಮೀ.), 110 ಮೀ. ಹರ್ಡಲ್ಸ್: ಸುಶಾಂತ್‌ ಎಂ.ಡಿ. (ಉಡುಪಿ; ಕಾಲ: 14.6 ಸೆ.), 1,500 ಮೀ. ಓಟ: ಸೂರ್ಯ ಕೆ. (ಡಿವೈಇಎಸ್‌ ಬೆಂಗಳೂರು; ಕಾಲ: 4 ನಿ.02.9 ಸೆ.), 3000 ಮೀ. ಓಟ: ನಾಗರಾಜ ಡಿ. (ಧಾರವಾಡ; ಕಾಲ: 9 ನಿ. 21.1 ಸೆ.), ಪೋಲ್‌ವಾಲ್ಟ್‌: ಜೆಸ್ಸನ್‌ ಕೆ.ಜಿ. (ಯಾದಗಿರಿ; ಎತ್ತರ: 4.7 ಮೀ.), ಡೆಕಾಥ್ಲಾನ್‌: ರಾಥೋಡ್‌ ಲೋಕೇಶ್ (6,162 ಪಾಯಿಂಟ್ಸ್) ಮಹಿಳೆಯರ ವಿಭಾಗ: 100 ಮೀ. ಹರ್ಡಲ್ಸ್: ಮೇಧಾ ಕಾಮತ್‌ (ಫ್ಯೂಶನ್; ಕಾಲ: 13.7 ಸೆ.), 10 ಸಾವಿರ ಮೀ. ಓಟ: ತೇಜಸ್ವಿನಿ (ಕೆಎಸ್‌ಪಿ; ಕಾಲ: 43 ನಿ. 28 ಸೆ.), ಹ್ಯಾಮರ್‌ ಥ್ರೋ: ಅಮೀನಾ (ಇನ್‌ಕಮ್‌ ಟ್ಯಾಕ್ಸ್; ದೂರ: 45.40 ಮೀ.), ಜಾವೆಲಿನ್‌ ಥ್ರೋ: ಕರೀಷ್ಮಾ ಸನಿಲ್ (ಉಡುಪಿ; ದೂರ: 49.88 ಮೀ.), ಟ್ರಿಪಲ್‌ ಜಂಪ್: ಪವಿತ್ರಾ ಜಿ. (ಉಡುಪಿ; ದೂರ: 12.85 ಮೀ.), 1,500 ಮೀ. ಓಟ: ಸ್ಮಿತಾ ಡಿ.ಆರ್‌. (ಬೆಂಗಳೂರು; ಕಾಲ: 4.36.9 ಸೆ.), 400 ಮೀ. ಓಟ: ಇಂಚರಾ ಎನ್‌.ಎಸ್‌ (ಕೆನರಾ ಬ್ಯಾಂಕ್‌; ಕಾಲ: 55.17 ಸೆ.), 3000 ಮೀ. ಸ್ಟೀಪಲ್‌ಚೇಸ್‌: ಸ್ಮಿತಾ ಡಿ.ಆರ್‌. (ಬೆಂಗಳೂರು; ಕಾಲ: 10 ನಿ. 58.6 ಸೆ.) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.