| ಟಿಟಿ: ಭಾರತ ಪುರುಷರ ತಂಡ ಶುಭಾರಂಭ ನವದೆಹಲಿ: ಭಾರತದ ಪುರುಷರ ತಂಡದವರು ಟೇಬಲ್‌ ಟೆನಿಸ್‌ ಟೂರ್ನಿಯ ಮೊದಲ ಪಂದ್ಯದಲ್ಲಿ 3–0 ಯಿಂದ ಯೆಮನ್‌ ವಿರುದ್ಧ ಗೆದ್ದು ಶುಭಾರಂಭ ಮಾಡಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಅನುಭವಿ ಶರತ್ ಕಮಲ್, ಜಿ.ಸತ್ಯನ್‌ ಮತ್ತು ಹರ್ಮೀತ್‌ ದೇಸಾಯಿ ಅವರು ತಮ್ಮ ಎದುರಾಳಿಗಳನ್ನು ಸುಲಭವಾಗಿ ಮಣಿಸಿ, ಭಾರತದ ಗೆಲುವಿಗೆ ಕಾರಣರಾದರು. ಮೊದಲು ಕಣಕ್ಕಿಳಿದ ಸತ್ಯನ್ 11–3, 11–2, 11–6 ರಿಂದ ಅಲಿ ಒಮರ್‌ ಅಹ್ಮದ್‌ ಅವರನ್ನು ಕೇವಲ 14 ನಿಮಿಷಗಳಲ್ಲಿ ಸೋಲಿಸಿದರು. ತಮ್ಮ ಕೊನೆಯ ಏಷ್ಯನ್‌ ಗೇಮ್ಸ್‌ನಲ್ಲಿ ಆಡುತ್ತಿರುವ 41 ವರ್ಷದ ಶರತ್‌ ಕಮಲ್ 11–3, 11–4, 11–6 ರಿಂದ ಇಬ್ರಾಹಿಂ ಅಬ್ದುಲ್‌ಹಕೀಂ ವಿರುದ್ಧ ಗೆದ್ದು 2–0 ಮುನ್ನಡೆ ತಂದಿತ್ತರು. ಭಾರತದ ಅಗ್ರ ರ್‍ಯಾಂಕ್‌ನ ಆಟಗಾರ ಹರ್ಮೀತ್‌ ಮೂರನೇ ಸಿಂಗಲ್ಸ್‌ನಲ್ಲಿ 11–1, 11–1, 11–7 ರಿಂದ ಮಗ್ದ್‌ ಅಹ್ಮದ್ ಅಲಿ ಎದುರು ಸುಲಭ ಜಯ ಸಾಧಿಸಿದರು. ಭಾರತ ತಂಡ ‘ಎಫ್‌’ ಗುಂಪಿನ ಎರಡನೇ ಪಂದ್ಯದಲ್ಲಿ ಸಿಂಗಪುರ ತಂಡದ ಸವಾಲನ್ನು ಎದುರಿಸಲಿದೆ. ಮಹಿಳೆಯರು ತಮ್ಮ ಮೊದಲ ಪಂದ್ಯದಲ್ಲಿ ಸಿಂಗಪುರ ವಿರುದ್ಧ ಪೈಪೋಟಿ ನಡೆಸುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.