ರಾಷ್ಟ್ರೀಯ ಬಿಲ್ಲುಗಾರಿಕೆ ಕೂಟ: ಲಖನೌ ತಂಡ ಚಾಂಪಿಯನ್ ಯಲಹಂಕ: ಬಾಗಲೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಬಿಲ್ಲುಗಾರಿಕೆ ಕೂಟ- 2023ರಲ್ಲಿ ಲಖನೌ ತಂಡವು ಸಮಗ್ರ ತಂಡ ಪ್ರಶಸ್ತಿ ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭೋಪಾಲ್‌ ತಂಡವು 2ನೇ ಸಮಗ್ರ ಚಾಂಪಿಯನ್‌ಶಿಪ್‌ ಪ್ರಶಸ್ತಿ ಪಡೆಯಿತು. ಇಂಡಿಯನ್ ರೌಂಡ್ಸ್ ಬಾಲಕರ ವಿಭಾಗದಲ್ಲಿ ಶಿಲ್ಲಾಂಗ್ ಪ್ರಥಮ ಹಾಗೂ ಲಖನೌ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಬಾಲಕಿಯರ ವಿಭಾಗದಲ್ಲಿ ಶಿಲ್ಲಾಂಗ್ ಪ್ರಥಮ ಹಾಗೂ ಪಟ್ನಾ ತಂಡ ದ್ವಿತೀಯ ಸ್ಥಾನ ಗಳಿಸಿದೆ. ರಿಕರ್ವ್ ರೌಂಡ್ ಬಾಲಕರ ವಿಭಾಗದಲ್ಲಿ ಲಖನೌ ಪ್ರಥಮ ಹಾಗೂ ಭೋಪಾಲ್ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಲಖನೌ ಪ್ರಥಮ ಹಾಗೂ ಪುಣೆ ತಂಡ ದ್ವಿತೀಯ ಸ್ಥಾನ ಗಳಿಸಿವೆ. ಇಂಡಿಯನ್ ರೌಂಡ್ಸ್ ವಿಭಾಗದಲ್ಲಿ ಉತ್ತಮ ಗುರಿಕಾರ ಪ್ರಶಸ್ತಿಯನ್ನು ಜವಾಹರ ನವೋದಯ ವಿದ್ಯಾಲಯದ ಶಿಲ್ಲಾಂಗ್‌ನ ಉಮಾಥೆಲ್ ವಲಯದ ಮಹೆಂಗ್ಬಾಮ್ ಬಿಕಾಶ್ ಸಿಂಗ್ ಹಾಗೂ ಪುಣೆಯ ಪರ್ಭಾನಿ ವಲಯದ ಅಮೃತ್ ಪಾಟಿಲ್ ಪಡೆದರು. ಪಥಸಂಚಲನ ವಿಭಾಗದಲ್ಲಿ ಹೈದರಾಬಾದ್ ಪ್ರಥಮ ಹಾಗೂ ಪಟ್ಣಾ ತಂಡ ದ್ವಿತೀಯ ಸ್ಥಾನ ಗಳಿಸಿದವು. ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣ, ವಿಜೇತರಿಗೆ ಬಹುಮಾನ ವಿತರಿಸಿದರು. ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀತಿ ಮುನೇಗೌಡ, ಸದಸ್ಯರಾದ ಬಿ.ಎಸ್.ಪ್ರಭುಸ್ವಾಮಿ, ಬಿ.ಧನಂಜಯ, ವೀಣಾ ಶಿವಣ್ಣ, ಪ್ರೆಸ್ಟೀಜ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಆಂಜಿನಪ್ಪ, ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಎಸ್.ಕಣ್ಣನ್ ಉಪಸ್ಥಿತರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.