| ಪುರುಷರ ವಾಲಿಬಾಲ್ ಪಂದ್ಯ: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು ಹಾಂಗ್‌ಝೌ: ಭಾರತದ ಪುರುಷರ ವಾಲಿಬಾಲ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ 0–3ರ ನೇರ ಸೆಟ್ ಅಂತರದಲ್ಲಿ ಪರಾಭವಗೊಂಡಿದೆ. 1ಗಂಟೆ 14 ನಿಮಿಷ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ 25–21, 25–20 ಹಾಗೂ 25–23 ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿತು. 2018ರ ಬೆಳ್ಳಿ ಪದಕ ವಿಜೇತ ದಕ್ಷಿಣ ಕೊರಿಯಾ ವಿರುದ್ಧ 3–2ರ ಗೆಲುವು ಹಾಗೂ ಕಾಂಬೊಡಿಯಾ ವಿರುದ್ಧ 3–0 ಗೆಲುವು ಸಾಧಿಸಿದ್ದ ಭಾರತ ತಂಡಕ್ಕೆ ಇದು ತೀವ್ರ ಆಘಾತ ತಂದಿದೆ. ಇಷ್ಟು ಮಾತ್ರವಲ್ಲದೆ ಚೈನೀಸ್‌ನ ಥೈಪೆ ವಿರುದ್ಧ 3–0 ಅಂತರದ ಗೆಲುವನ್ನು ಭಾರತ ದಾಖಲಿಸಿತ್ತು. ನಾಕೌಟ್ ಹಂತದಲ್ಲಿ ಜಪಾನ್ ವಿರುದ್ಧ 0–3 ಅಂತರದಲ್ಲಿ ಭಾರತ ಪರಾಭವಗೊಂಡಿತ್ತು. ಭಾರತದ ಮಹಿಳೆಯರ ವಾಲಿಬಾಲ್‌ ತಂಡ ಉತ್ತರ ಕೊರಿಯಾ ವಿರುದ್ಧ ಶನಿವಾರ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.