4X400ಮೀ ರಿಲೇ: ಪುರುಷರ ತಂಡಕ್ಕೆ ಚಿನ್ನ, ಮಹಿಳೆಯರ ತಂಡಕ್ಕೆ ಬೆಳ್ಳಿ ಹಾಂಗ್‌ಝೌ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳ ಪದಕ ಬೇಟೆ ಮುಂದುವರಿದಿದೆ. ಅಥ್ಲೀಟ್ ವಿಭಾಗದಲ್ಲೂ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 4X400ಮೀ ರಿಲೇ ವಿಭಾಗದಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಜಯಿಸಿದೆ. 3 ನಿಮಿಷ 01.58 ಸೆಕೆಂಡುಗಳಲ್ಲಿ ಗುರಿ ತಲುಪಿದ ಮೊಹಮ್ಮದ್ ಅನಾಸ್ ಯಾಹ್ಯಾ, ಅಮೋಜ್ ಜೇಕಬ್, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 4X400ಮೀ ರಿಲೇ ವಿಭಾಗದಲ್ಲಿ ಮಹಿಳೆಯರ ತಂಡವೂ ಬೆಳ್ಳಿ ಪದಕವನ್ನು ಜಯಿಸಿದೆ. 3 ನಿಮಿಷ 27.85 ಸೆಕೆಂಡುಗಳಲ್ಲಿ ಗುರಿ ತಲುಪಿದ ವಿತ್ಯಾ ರಾಮ್‌ರಾಜ್, ಐಶ್ಚರ್ಯ ಕೈಲಾಶ್ ಮಿಶ್ರಾ, ಪ್ರಾಚಿ ಮತ್ತು ಸುಭಾ ವೆಂಕಟೇಶನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 🇮🇳 # !! ' 4X400m @ , , & 🥇 3:01.58! ! … ../6j6feXqQZd #🥈 #! ' 4X400m , , & 3:27.85 🥈 ! 🥳👏#AsianGames2022#Cheer4India… ../pJ1Gv4eIlG ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.