: ಹರ್ಮನ್, ಮನದೀಪ್ ಆಟಕ್ಕೆ ಬೆಚ್ಚಿದ ಬಾಂಗ್ಲಾ, ಸೆಮಿಫೈನಲ್‌ಗೆ ಭಾರತ ಹಾಂಗ್‌ಝೌ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನ ಹಾಕಿ ಟೂರ್ನಿಯಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್, ಮನದೀಪ್ ಸಿಂಗ್ ಅವರು ಹೊಡೆದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಭಾರತ ಪುರುಷರ ಹಾಕಿ ತಂಡವು ಬಾಂಗ್ಲಾದೇಶದ ಎದುರು ಜಯ ದಾಖಲಿಸಿದ್ದು, ಈ ಗೆಲುವಿನೊಂದಿಗೆ ಭಾರತ ಸತತ ನಾಲ್ಕನೇ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು (ಸೋಮವಾರ) ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 12–0 ಗೋಲುಗಳಿಂದ ಬಾಂಗ್ಲಾ ಎದುರು ಜಯಿಸಿದೆ. ಹರ್ಮನ್‌ಪ್ರೀತ್ ಸಿಂಗ್ (2ನೇ ನಿಮಿಷ, 4ನಿ, 32ನಿ) ಅವರು ಹೊಡೆದ ಗೋಲುಗಳಿಂದಾಗಿ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಲ್ಲದೇ ಮನದೀಪ್ ಸಿಂಗ್ (18ನಿ, 24ನಿ, 46ನಿ), ಲಲಿತ್‌ ಕುಮಾರ್ ಉಪಾಧ್ಯಾಯ (23ನಿ), ಅಮಿತ್ (28ನಿ), ಅಭಿಷೇಕ್ (41ನಿ, 57ನಿ), ನೀಲಕಂಠ ಶರ್ಮಾ (47ನಿ) ಮತ್ತು ಗುರ್ಜಂತ್ ಸಿಂಗ್ (56ನಿ) ಗೋಲು ಹೊಡೆದರು. ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು 10–2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತ್ತು. ಇತ್ತ ಬಾಂಗ್ಲಾ ತಂಡವು 7–3 ಗೋಲುಗಳಿಂದ ಸಿಂಗಪುರವನ್ನು ಮಣಿಸಿತ್ತು. , # 😍 : 📆 3rd 7:45 🇮🇳 🇭🇰() 📍, . 📺 .# # # #… ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.