ರಾಯಚೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ: ಸಂಗಮೇಶ, ಅಕ್ಷತಾ ವೇಗದ ಓಟಗಾರರು ರಾಯಚೂರು: ಚುರುಕಿನಿಂದ ಓಡಿದ ಸಂಗಮೇಶ ಹಾಗೂ ಅಕ್ಷತಾ ಅವರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 100 ಮೀ. ಓಟದಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ಇಲ್ಲಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2023-24ನೇ ಸಾಲಿನ ಕ್ರೀಡಾಕೂಟದ ಮಹಿಳೆಯರ 200 ಮೀ ಓಟದಲ್ಲೂ ಅಕ್ಷತಾ ಮೊದಲ ಸ್ಥಾನ ಪಡೆದು ಮಿಂಚಿದರು. ವಿವಿಧ ಕ್ರೀಡೆಗಳಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಫಲಿತಾಂಶ ಇಂತಿದೆ. ಪುರುಷರ ವಿಭಾಗ 100 ಮೀ ಓಟ: ಸಂಗಮೇಶ–1, ನಶಪ್ಪ–2. 200 ಮೀ. ಓಟ: ಗೋಪಾಲಗೌಡ–1, ಅಕ್ಬರ್‌ ಅಲಿ–2. 400 ಮೀ ಓಟ: ರವಿಕುಮಾರ–1, ಅಕ್ಬರ್‌ಅಲಿ–2. 800 ಮೀ ಓಟ: ಗೋವಿಂದ–1, ದುರ್ಶಪ್ಪ–2. 1,500 ಮೀ ಓಟ: ಶಿವರಾಜ–1, ಶ್ರೀಕಾಂತ–2. 5,000 ಮೀ ಓಟ: ಮಹಮ್ಮದ್‌ ನಿನ್‌ಸುನ್–1, ತಾಯ‍ಪ್ಪ–2. 10,000 ಮೀ ಓಟ: ನಿಂಗಣ್ಣ ದೇಸಾಯಿ–1, ತಾಯಪ್ಪ–2. ಉದ್ದ ಜಿಗಿತ: ತಿಮ್ಮಾರೆಡ್ಡಿ–1, ರಾಹುಲ್–2. ಎತ್ತರ ಜಿಗಿತ: ಬಸವರಾಜ–1, ರಾಹುಲ್–2. ಗುಂಡು ಎಸೆತ: ಪ್ರಕಾಶ–1, ಅಮರೇಶ–2. ಟ್ರಿಪಲ್ ಜಂಪ್: ರಾಹುಲ್–1, ತಿಮ್ಮಾರೆಡ್ಡಿ–2. ಜಾವಲಿನ್ ಥ್ರೋ: ರವಿಕುಮಾರ–1, ಆರೋಗ್ಯ ಪ್ರಶಾಂತ–2. ಡಿಸ್ಕಸ್ ಥ್ರೋ: ಮಂಜುನಾಥ–1, ಪ್ರಕಾಶ–2. 110 ಮೀ. ಹರ್ಡಲ್ಸ್: ಚನ್ನಬಸವ. 4X 100 ಮೀ ರಿಲೇ: ನಾಗಪ್ಪ ತಂಡ. 4X400 ಮೀ ರಿಲೇ: ರವಿ ತಂಡ-1, ಮುದುಕ ತಂಡ-2. ಬ್ಯಾಡ್ಮಿಂಟನ್ ಸಿಂಗಲ್ಸ್: ಅರವಿಂದ್ ಕೂಂಗರ್-1, ಅಭಿರಾಮ್ ಕೂಂಗರ್-2. ಬ್ಯಾಡ್ಮಿಂಟನ್ ಡಬಲ್ಸ್: ಅರವಿಂದ್ ಕೂಂಗರ್, ಸುಮಂತ ಜಯಸೂರ್ಯ–1 ಟೇಬಲ್ ಟೆನಿಸ್ ಸಿಂಗಲ್ಸ್ : ಸಂಜಯ ಕುಮಾರ–1, ಆಂಥೋನಿ–2. ಟೆನಿಸ್ ಟೇಬಲ್ ಡಬಲ್ಸ್: ಜೀತನ್ ಪಾರೇಖ್, ಅಂಥೋನಿ. ಕೊಕ್ಕೊ: ರಾಯಚೂರು ತಂಡ. ವಾಲಿಬಾಲ್: ಮಾನ್ವಿ ತಂಡ. ಹಾಕಿ: ಯಂಗ್ ಸ್ಟಾರ್ ಕ್ಲಬ್, ಫುಟ್‌ಬಾಲ್: ರಾಯಚೂರು ಯುನೈಟೆಡ್ ತಂಡ, ಬ್ಯಾಸ್ಕೇಟ್‌ಬಾಲ್‌: ಸ್ಪಾನ್ ಕ್ಲಬ್ ತಂಡ. ಹ್ಯಾಂಡ್ ಬಾಲ್: ಅಸ್ಕಿಹಾಳ ತಂಡ. ಬಾಲ್ ಬ್ಯಾಡ್ಮಿಂಟನ್: ರಾಯಚೂರು ತಂಡ (ಜಂಬಣ್ಣ), ಥ್ರೋ ಬಾಲ್: ಸಿಂಧನೂರು ತಂಡ. ಈಜು 100 ಮೀ ಫ್ರೀ ಸ್ಟೈಲ್: ಸುರೇಶ–1, ಸಂತೋಷ–2. 100 ಮೀ ಬ್ಯಾಕ್ ಸ್ಟ್ರೋಕ್: ವಸಂತ–1, ಮಲ್ಲಯ್ಯ–2, 100 ಮೀ ಬ್ರೆಸ್ಟ್ ಸ್ಟ್ರೋಕ್: ವಸಂತ–1, ನಿತಿನ್–2. 100 ಮೀ ಬಟರ್ ಫ್ಲೈ: ವಸಂತ–1, ಶಿವಲಿಂಗ–2. 200 ಮೀ ವೈಯಕ್ತಿಕ ಮಿಡ್ಲೆ: ನಿತಿನ್. 4x100 ಮೀ ಫ್ರೀ ಸ್ಟೈಲ್ ರಿಲೇ: ಸಂತೋಷ, ವಸಂತ, ಶಿವಲಿಂಗ, ಮಲ್ಲಯ್ಯ. ಯೋಗ: ಹರಿಕಿಶನ್-1, ಸಮರ್ಥ ಪಾಮಿ-2. ಮಹಿಳೆಯರ ವಿಭಾಗ 100 ಮೀ ಓಟ: ಅಕ್ಷತಾ–1, ಅಖಿಲಾ–2. 200 ಮೀ. ಓಟ: ಅಕ್ಷತಾ–1, ನಾಗಮ್ಮ–2. 400 ಮೀ ಓಟ: ಮಾನಸಾ–1, ಲಕ್ಷ್ಮಿ–2. 800 ಮೀ ಓಟ: ಮಾನಸಾ–1, ಅಮೃತಾ–2. 1,500 ಮೀ ಓಟ: ಯಲ್ಲಮ್ಮ–1, ಶ್ರೀಷಾ–2. 3,000 ಮೀ ಓಟ: ಯಲ್ಲಮ್ಮ–1, ಶ್ರೀಷಾ–2 ಉದ್ದ ಜಿಗಿತ: ಅನನ್ಯ–1, ಅಖೀಲಾ–2. ಎತ್ತರ ಜಿಗಿತ: ರಾಧಿಕಾ–1, ಭೂಮಿಕಾ–2. ಗುಂಡು ಎಸೆತ: ಗುಣವರ್ಧನಿ–1, ಸಿಂಧು–2. ಟ್ರಿಪಲ್ ಜಂಪ್: ಶೋಭಾ–1, ಅನುರಾಧ–2. ಜಾವಲಿನ್ ಥ್ರೋ: ಮಹೇಶ್ವರಿ–1, ಸಹನಾ–2. ಡಿಸ್ಕಸ್ ಥ್ರೋ: ಗುಣವರ್ಧನಿ–1, ಮಹೇಶ್ವರಿ–2. 100 ಮೀ. ಹರ್ಡಲ್ಸ್: ಶ್ರೀದುರ್ಗ–1, ವಿದ್ಯಾಶ್ರೀ–2. 4x100 ಮೀ. ರಿಲೇ : ಕಾವ್ಯ, ಅಖಿಲಾ, ಲಕ್ಷ್ಮೀ, ಉಮಸಲ್ಮ 4x400 ಮೀ.ರಿಲೇ: ಸಿಂಧನೂರಿನ ಅಕ್ಷತಾ, ಸುಧಾ, ಹಾರೀಕಾ, ಮಹಾಲಕ್ಷ್ಮಿ. ಬ್ಯಾಡ್ಮಿಂಟನ್ ಡಬಲ್ಸ್: ವೈಷ್ಣವಿ. ಕೆ, ಅನನ್ಯರಾಜ್. ಟೇಬಲ್ ಟೆನಿಸ್(ಸಿಂಗಲ್ಸ್): ಸೃಷ್ಟಿ-1, ಹೂದಿತಾ-2. ಟೇಬಲ್ ಟೆನ್ನಿಸ್ (ಡಬಲ್ಸ್): ಸೃಷ್ಟಿ, ಪ್ರತಿಮಾ ಕೊಕ್ಕೊ: ರಾಯಚೂರು ತಂಡ. ಕಬಡ್ಡಿ: ಮಾನ್ವಿಯ ಮದ್ಲಾಪುರ ತಂಡ. ವಾಲಿಬಾಲ್: ಎಸ್.ಎಸ್.ಆರ್.ಜಿ ಮಹಿಳಾ ಕಾಲೇಜು ತಂಡ. ಹಾಕಿ: ಲಯನ್ಸ್ ತಂಡ. ಫುಟ್‌ಬಾಲ್: ಲಯನ್ಸ್ ತಂಡ. ಬ್ಯಾಸ್ಕೇಟ್‌ಬಾಲ್‌: ಸ್ಪಾನ್ ಕ್ಲಬ್. ಹ್ಯಾಂಡ್‌ಬಾಲ್: ಲಯನ್ಸ್ ತಂಡ. ಬಾಲ್ ಬ್ಯಾಡ್ಮಿಂಟನ್: ಮಸ್ಕಿ (ಹಾರಾಪುರ). ಥ್ರೋಬಾಲ್: ಸಿಂಧನೂರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.