| ಈಕ್ವೆಸ್ಟ್ರಿಯನ್‌: ಯಶ್‌ಗೆ ನಿರಾಸೆ ಹಾಂಗ್‌ಝೌ: ಭಾರತದ ಯಶ್ ನೆನ್ಸೀ ಅವರು ಏಷ್ಯನ್‌ ಕ್ರೀಡಾಕೂಟದ ಈಕ್ವೆಸ್ಟ್ರಿಯನ್‌ನ ಜಂಪಿಂಗ್‌ ವಿಭಾಗದ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಶುಕ್ರವಾರ ನಡೆದ ಫೈನಲ್‌ನಲ್ಲಿ ಅವರು ಯಾವುದೇ ಪಾಯಿಂಟ್ಸ್‌ ಗಳಿಸಲು ವಿಫಲರಾದರು. ಯಶ್, ಅರ್ಹತಾ ಸುತ್ತಿನಲ್ಲಿ 24ನೇ ಸ್ಥಾನ ಪಡೆದು ಫೈನಲ್‌ ಸುತ್ತು ತಲುಪಿದ್ದರು. ಸೌದಿ ಅರೇಬಿಯಾದ ಅಬ್ದುಲ್ಲಾ ವಲೀದ್‌ ಮತ್ತು ಯುಎಇಯ ಅಲ್‌ಜನೇಬಿ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡರು. ಈ ಬಾರಿಯ ಕೂಟದ ಈಕ್ವೆಸ್ಟ್ರಿಯನ್‌ನಲ್ಲಿ ಭಾರತವು ಎರಡು ಪದಕ (ತಲಾ ಒಂದು ಚಿನ್ನ, ಕಂಚು) ಜಯಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.