ಅಥ್ಲೆಟಿಕ್ಸ್: ಮುರಳಿ, ಅಂಕಿತಾಗೆ ಚಿನ್ನ ಬೆಂಗಳೂರು: ಗುಜರಾತ್‌ನ ಮುರಳಿ ಗವಿತ್‌ ಮತ್ತು ರೈಲ್ವೇಸ್‌ನ ಅಂಕಿತಾ ಅವರು ಇಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 5 ಸಾವಿರ ಮೀ. ಓಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಿನ್ನ ಗೆದ್ದುಕೊಂಡರು. ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ವಿಭಾಗದ ಓಟವನ್ನು ಮುರಳಿ 14 ನಿ. 8.49 ಸೆ.ಗಳಲ್ಲಿ ಪೂರೈಸಿದರು. ಅಂಕಿತಾ ಅವರು ನಿಗದಿತ ದೂರ ಕ್ರಮಿಸಲು 16 ನಿ. 10.5 ಸೆ.ಗಳನ್ನು ತೆಗೆದುಕೊಂಡರು. ಆರ್ಯಗೆ ಕಂಚು: ಪುರುಷರ ಲಾಂಗ್‌ಜಂಪ್‌ನಲ್ಲಿ ಕರ್ನಾಟಕದ ಎಸ್‌.ಆರ್ಯ, 7.65 ಮೀ. ಸಾಧನೆಯೊಂದಿಗೆ ಕಂಚು ಗೆದ್ದುಕೊಂಡರು. ನಾಲ್ಕನೇ ಪ್ರಯತ್ನದಲ್ಲಿ ಅವರು ಈ ದೂರ ಕಂಡುಕೊಂಡರು. ತಮಿಳುನಾಡಿನ ಪಿ.ಡೇವಿಡ್‌ (7.78 ಮೀ.) ಮತ್ತು ಮಧ್ಯಪ್ರದೇಶದ ಆದಿತ್ಯ ಸಿಂಗ್ (7.73 ಮೀ.) ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು. ಸರ್ವಿಸಸ್‌ ಮತ್ತು ರೈಲ್ವೇಸ್‌ ಅಥ್ಲೀಟ್‌ಗಳು ಕೂಟದ ಮೂರನೇ ದಿನವೂ ಪ್ರಾಬಲ್ಯ ಮೆರೆದರು. ಫಲಿತಾಂಶ ಪುರುಷರ ವಿಭಾಗ: 5000 ಮೀ. ಓಟ: ಮುರಳಿ ಗವಿತ್‌ (ಗುಜರಾತ್‌; ಕಾಲ: 14 ನಿ. 8.49 ಸೆ.)–1, ಗೌರವ್‌ ಮಾಥುರ್‌ (ಸರ್ವಿಸಸ್‌)–2, ಸಚ್ಚೇಲಾಲ್‌ ಪಟೇಲ್ (ಸರ್ವಿಸಸ್‌)–3 4X400 ಮೀ. ರಿಲೆ: ಸರ್ವಿಸಸ್‌ (ಕಾಲ: 3 ನಿ. 8.08 ಸೆ.)–1, ತಮಿಳುನಾಡು–2, ರಾಜಸ್ಥಾನ–3 ಲಾಂಗ್‌ಜಂಪ್‌: ಪಿ.ಡೇವಿಡ್‌ (ತಮಿಳುನಾಡು; ದೂರ: 7.78 ಮೀ.)–1, ಆದಿತ್ಯ ಸಿಂಗ್‌ (ಮಧ್ಯಪ್ರದೇಶ)–2, ಎಸ್‌.ಆರ್ಯ (ಕರ್ನಾಟಕ)–3 ಹೈಜಂಪ್‌: ಭಾರತಿ ವಿಶ್ವನಾಥ‌ನ್ (ಸರ್ವಿಸಸ್‌; ಎತ್ತರ: 2.18 ಮೀ.)–1, ಗುರುಜೀತ್‌ ಸಿಂಗ್‌ (ಪೊಲೀಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌)–2, ಕೌಸ್ತುಭ್‌ ಜೈಸ್ವಾಲ್‌ (ಒಎನ್‌ಜಿಸಿ)–3 ಹ್ಯಾಮರ್‌ ಥ್ರೋ: ತರಣ್‌ವೀರ್‌ ಬೇನ್ಸ್‌ (ಸರ್ವಿಸಸ್‌; ದೂರ: 66.41 ಮೀ.)–1, ನೀರಜ್‌ ಕುಮಾರ್‌ (ಸರ್ವಿಸಸ್‌)–2, ಅಜಯ್‌ ಕುಮಾರ್‌ (ಹರಿಯಾಣ)–3 ಶಾಟ್‌‍‍ಪಟ್: ಸಾಹಿಬ್‌ ಸಿಂಗ್ (ಒಎನ್‌ಜಿಸಿ; ದೂರ: 18.96 ಮೀ.)–1, ಪಾರ್ಥ್‌ ಲಾಕ್ರ (ದೆಹಲಿ)–2, ಅಭಿಲಾಷ್‌ ಸಕ್ಸೇನಾ (ರೈಲ್ವೇಸ್‌)–3 ಮಹಿಳೆಯರ ವಿಭಾಗ: 5000 ಮೀ. ಓಟ: ಅಂಕಿತಾ (ರೈಲ್ವೇಸ್‌; ಕಾಲ: 16 ನಿ. 10.5 ಸೆ.)–1, ಸೀಮಾ (ಹಿಮಾಚಲ ಪ್ರದೇಶ)–2, ದೃಷ್ಟಿಬೆನ್‌ ಚೌಧರಿ (ಗುಜರಾತ್)–3 4X400 ಮೀ. ರಿಲೆ: ರೈಲ್ವೇಸ್‌ (ಕಾಲ: 3 ನಿ. 37.82 ಸೆ.)–1, ಪಂಜಾಬ್‌–2, ಹರಿಯಾಣ–3 ಟ್ರಿಪಲ್‌ ಜಂಪ್: ಮಲ್ಲಲ ಅನೂಷಾ (ಆಂಧ್ರಪ್ರದೇಶ; ದೂರ: 13.40 ಮೀ.)–1, ಭೈರವಿ ರಾಯ್ (ರೈಲ್ವೇಸ್‌)–2, ಶಾರ್ವರಿ ಪರುಲೇಕರ್‌ (ಮಹಾರಾಷ್ಟ್ರ)–3 ಪೋಲ್‌ವಾಲ್ಟ್‌: ಪವಿತ್ರಾ ವೆಂಕಟೇಶ್ (ರೈಲ್ವೇಸ್‌; ಎತ್ತರ: 4.05 ಮೀ.)–1, ಭರಣಿಕ ಇಳಂಗೋವನ್ (ರೈಲ್ವೇಸ್‌)–2, ಮರಿಯಾ ಜೈಸನ್‌ (ಕೇರಳ)–3 ಡಿಸ್ಕಸ್‌ ಥ್ರೋ: ನಿಧಿ (ರೈಲ್ವೇಸ್‌; ದೂರ: 52.86 ಮೀ.)–1, ನೀತಿಕಾ ವರ್ಮಾ (ಉತ್ತರ ಪ್ರದೇಶ)–2, ಸಂದೀಪ್‌ ಕುಮಾರಿ (ರೈಲ್ವೇಸ್‌)–3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.