| : ಸೆಮಿಫೈನಲ್‌ನಲ್ಲಿ ಭಾರತಕ್ಕೆ ಪಾಕ್ ಎದುರಾಳಿ ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದ ಕಬಡ್ಡಿಯಲ್ಲಿ ಅಜೇಯ ಓಟ ಮುಂದುವರಿಸಿದ ಭಾರತ ಪುರುಷರ ತಂಡದವರು ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ಸವಾಲು ಎದುರಿಸಲಿದ್ದಾರೆ. ಗುರುವಾರ ನಡೆದ ‘ಎ’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡ 56–28 ರಿಂದ ಜಪಾನ್‌ ತಂಡವನ್ನು ಮಣಿಸಿತು. ಅದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ 50–27 ರಿಂದ ಚೀನಾ ತೈಪೆ ತಂಡವನ್ನು ಸೋಲಿಸಿತ್ತು. ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಭಾರತ ತಂಡ, ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಪಾಕಿಸ್ತಾನ ವಿರುದ್ಧ ಆಡಲಿದೆ. ಚೀನಾ ತೈಪೆ ಮತ್ತು ಜಪಾನ್‌ ತಂಡಗಳ ವಿರುದ್ಧ ಭಾರತ, ನಿರಾಯಾಸ ಗೆಲುವು ಸಾಧಿಸಿತು. ಚೀನಾ ತೈಪೆ ಎದುರು ವಿರಾಮದ ವೇಳೆಗೆ 28–12 ರಿಂದ ಮುನ್ನಡೆ ಸಾಧಿಸಿತ್ತು. ಪಂದ್ಯದಲ್ಲಿ ಒಟ್ಟು ಮೂರು ಸಲ ಎದುರಾಳಿಗಳನ್ನು ಆಲೌಟ್‌ ಮಾಡಿತಲ್ಲದೆ, ರೇಡರ್‌ಗಳು ನಾಲ್ಕು ಬೋನಸ್‌ ಪಾಯಿಂಟ್ಸ್ ತಂದಿತ್ತರು. ಜಪಾನ್‌ ಎದುರಿನ ಪಂದ್ಯದಲ್ಲೂ ಪೂರ್ಣ ಪ್ರಾಬಲ್ಯ ಮೆರೆದ ಭಾರತದ ಆಟಗಾರರು, ವಿರಾಮದ ವೇಳೆಗೆ 24 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದರು. ಪುರುಷರ ವಿಭಾಗದ ಮತ್ತೊಂದು ನಾಲ್ಕರಘಟ್ಟದ ಹಣಾಹಣಿಯಲ್ಲಿ ಇರಾನ್‌ ಮತ್ತು ಚೀನಾ ತೈಪೆ ಹೋರಾಟ ನಡೆಸಲಿವೆ. ಭಾರತ–ನೇಪಾಳ ಸೆಣಸು: ಶುಕ್ರವಾರ ನಡೆಯಲಿರುವ ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತ– ನೇಪಾಳ ಎದುರಾಗಲಿವೆ. ಇನ್ನೊಂದು ಪಂದ್ಯದಲ್ಲಿ ಇರಾನ್‌– ಚೀನಾ ತೈಪೆ ತಂಡಗಳು ಆಡಲಿವೆ. ' # - 💪✅ # 🔥🙌#Cheer4India # #AsianGames2023 # ../nh6e8vjeV0 , 🔥# 😎# #Cheer4India # #Hangzhou2022 # | @Media_SAI ../VldHCM32Xw ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.