ಕರಾಟೆಯಲ್ಲಿ ತಟ್ಟನಹಳ್ಳಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಆನೇಕಲ್ : ತಾಲ್ಲೂಕಿನ ತಟ್ಟನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೌಕುಸೈ ಟೆಕಿ ಆನ್‌ಲೈನ್‌ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನದ ಪದಕ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ತಟ್ಟನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಗುರು ಶಿಷ್ಯ ಟ್ಯಾಲೆಂಟ್‌ ಅಕಾಡೆಮಿಯಿಂದ ಪ್ರತಿನಿಧಿಸಿದ್ದರು. ಚಿನ್ಮಯ್‌, ಚರಣ್‌ಜಿತ್‌, ಮೌಲ್ಯ ಮತ್ತು ಆರ್‌.ಮಲ್ಲಪ್ಪ ಅವರು ಚಿನ್ನದ ಪದಕ ಗಳಿಸಿದ್ದಾರೆ. ಕೆ.ದಿವ್ಯ ಅವರು ಎರಡು ಬೆಳ್ಳಿ ಪದಕ, ರೋಷನ್‌ ಕಂಚಿನ ಪದಕ ಪಡೆದಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಕಾಡೆಮಿಯು ಉಚಿತ ತರಬೇತಿ ನೀಡಿ ವೇದಿಕೆಯನ್ನು ಒದಗಿಸಿತ್ತು. ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ಗುರು ಶಿಷ್ಯ ಟ್ಯಾಲೆಂಟ್‌ ಅಕಾಡೆಮಿಯ ಮಂಜುನಾಥ್‌ ತಿಳಿಸಿದರು. ಕರಾಟೆ ತರಬೇತುದಾರ ನಾಗೇಂದ್ರ ರಾವ್‌, ಗ್ರಾಮದ ಮುಖಂಡರಾದ ಭೈರೇಗೌಡ, ಟಿ.ಆರ್‌.ವೆಂಕಟೇಶ್, ಪಿಟಿ ರಾಜಣ್ಣ, ಮಂಜಪ್ಪ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.