ಹಾಕಿ | ಬೆಳಗಾವಿ, ಮೈಸೂರು ವಿಭಾಗ ತಂಡಗಳ ಜಯಭೇರಿ ಕುಶಾಲನಗರ (ಕೊಡಗು): ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲಾ ಹಾಕಿ ಟರ್ಫ್ ಮೈದಾನದಲ್ಲಿ ಮಂಗಳವಾರ ನಡೆದ ಲೀಗ್‌ ಹಂತದ ಪ್ರಾಥಮಿಕ, ಮತ್ತು ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾವಳಿಯಲ್ಲಿ ಬೆಳಗಾವಿ, ಮೈಸೂರು ವಿಭಾಗದ ತಂಡಗಳು ಪಾರಮ್ಯ ಮೆರೆದವು. 14 ರ ವಯೋಮಿತಯ ಬಾಲಕಿಯರ ಲೀಗ್ ಹಾಕಿ ಟೂರ್ನಿಯಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗ ತಂಡಗಳು ತಲಾ 7 ಅಂಕಗಳನ್ನು ಪಡೆದು ಸಮಬಲ ಸಾಧಿಸಿದವು. ಅಂತಿಮವಾಗಿ ಪಡೆದ ಗೋಲುಗಳ ಆಧಾರದ ಮೇಲೆ ಬೆಳಗಾವಿ ಪ್ರಥಮ ಸ್ಥಾನ ಪಡೆದುಕೊಂಡರೆ, ಕಲಬುರಗಿ ದ್ವಿತೀಯ ಹಾಗೂ ಮೈಸೂರು ತೃತೀಯ ಸ್ಥಾನ ಪಡೆದುಕೊಂಡಿತು. 17ರ ಬಾಲಕಿಯರ ಟೂರ್ನಿಯಲ್ಲಿ ಮೈಸೂರು ವಿಭಾಗ ಹಾಗೂ ಕೂಡಿಗೆ ಕ್ರೀಡಾಶಾಲೆ ತಂಡಗಳು ತಲಾ 10 ಪಾಯಿಂಟ್ಸ್‌ ಗಳಿಸುವ ಮೂಲಕ ಸಮಬಲ ಸಾಧಿಸಿದವು. ಅಂತಿಮವಾಗಿ ಗಳಿಸಿದ ಗೋಲುಗಳ ಆಧಾರದ ಮೇಲೆ ಮೈಸೂರು ಪ್ರಥಮ, ಕೂಡಿಗೆ ಕ್ರೀಡಾಶಾಲೆ ದ್ವಿತೀಯ ಹಾಗೂ ಬೆಂಗಳೂರು ತೃತೀಯ ಸ್ಥಾನ ಗಳಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.