ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ | ಕಬಡ್ಡಿ: ತಂಡಗಳ ರೋಚಕ ಹಣಾಹಣಿ ತುಮಕೂರು: ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ನಗರದಲ್ಲಿ ಗುರುವಾರ ಆಯೋಜಿಸಲಾಗಿತ್ತು. ಮೊದಲ ದಿನ ಪುರುಷರ ವಿಭಾಗದಲ್ಲಿ ಅಥ್ಲೆಟಿಕ್ಸ್ ಮತ್ತು ಕಬಡ್ಡಿ ಪಂದ್ಯಾವಳಿ ನಡೆದವು. ಶುಕ್ರವಾರ ಮಹಿಳೆಯರ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದವರು. 100 ಮೀಟರ್ ಓಟ: ಶಿವಮೊಗ್ಗದ ಎಂ.ಗೌತಮ್, ಕೋಲಾರದ ಸಿ.ವಿ.ಹೇಮಂತ್, ಶಿವಮೊಗ್ಗದ ಜಯಸೂರ್ಯ. 200 ಮೀಟರ್: ಎಸ್.ಯು.ಹೇಮಂತ್ ಕುಮಾರ್, ಎಂ.ನಿತಿನ್ ಗೌಡ, ಪಿ.ಪ್ರೀತಮ್. 400 ಮೀಟರ್ ಓಟ: ಶಿವಮೊಗ್ಗದ ಆಕಾಶ್ ಎಸ್.ಗೊಲ್ಲರ್, ಬೆಂಗಳೂರು ಗ್ರಾಮಾಂತರ ಎಂ.ನಿತಿನ್ ಗೌಡ, ರಾಮನಗರದ ಸಂಜೀವ್ ಆರ್.ಭೋವಿ. 800 ಮೀಟರ್: ತುಮಕೂರಿನ ಸುಚಿತ್, ಶಿವಮೊಗ್ಗದ ಆರ್.ಜಿ.ಸುಜಿತ್, ರಾಮನಗರದ ಅರುಣ್ ಕುಮಾರ್. 1,500 ಮೀಟರ್: ತುಮಕೂರಿನ ಗುರುಪ್ರಸಾದ್, ಶಿವಮೊಗ್ಗದ ಎಂ.ಎಸ್.ಅಶ್ರಿತ್, ತುಮಕೂರಿನ ಯು.ಸಿ.ವಿವೇಕ್. 5 ಸಾವಿರ ಮೀಟರ್: ತುಮಕೂರಿನ ಎನ್.ಕೆ.ಗುರುಪ್ರಸಾದ್, ಬೆಂಗಳೂರು ಗ್ರಾಮಾಂತರದ ಎಸ್.ಲಕ್ಷ್ಮಣ, ತುಮಕೂರಿನ ಎಚ್.ಎ.ದರ್ಶನ್. 10 ಸಾವಿರ ಮೀಟರ್: ಬೆಂಗಳೂರು ಗ್ರಾಮಾಂತರದ ಎಸ್.ಲಕ್ಷ್ಮಣ, ವಿ.ನಂದನ್, ತುಮಕೂರಿನ ಎಸ್.ಗೌತಮ್. 110 ಮೀಟರ್ ಹರ್ಡಲ್ಸ್: ತುಮಕೂರಿನ ದಿಶಂತ್ ನಾಯ್ಕ್, ಎಸ್.ಎಸ್.ಭುವನ್, ಕೋಲಾರದ ಎಸ್.ಆದರ್ಶ. ತ್ರಿವಿಧ ಜಿಗಿತ: ಕೋಲಾರದ ಎಸ್‌.ಶೆವಿಲ್ಕರ್, ಶಿವಮೊಗ್ಗದ ಎಚ್.ರಾಘವೇಂದ್ರ, ದಿಲೀಪ್. ಶಾಟ್‌ಫುಟ್: ರಾಮನಗರದ ಇ.ಹೇಮಂತ್, ತುಮಕೂರಿನ ಶರ್ಫನ್ ಅಹ್ಮದ್, ಶಿವಮೊಗ್ಗದ ಎಂ.ಮನೋಜ್. ಉದ್ದ ಜಿಗಿತ: ಶಿವಮೊಗ್ಗದ ರಾಘವೇಂದ್ರ, ಮಹ್ಮದ್ ಮುಜ್ ಮಿಲ್, ದಾವಣಗೆರೆಯ ವಿಲಾಸ್ ಕಿರಣ್ ಪಾಟೀಲ್. ಎತ್ತರ ಜಿಗಿತ: ಶಿವಮೊಗ್ಗದ ಸುದೀಪ್, ಕೋಲಾರದ ಸಿ.ವಿ.ಹೇಮಂತ್, ಶಿವಮೊಗ್ಗದ ಜಯಸೂರ್ಯ. ಜಾವೇಲಿನ್ ಥ್ರೋ: ತುಮಕೂರಿನ ಕೆ.ಜೆ.ರಂಗನಾಥ, ವಿ.ವಿಜಯ್ ಕುಮಾರ್, ದಾವಣಗೆರೆಯ ಎಸ್.ಸತೀಶ್ ನಾಯಕ್. ಡಿಸ್ಕಸ್ ಥ್ರೋ: ರಾಮನಗರ ಇ.ಹೇಮಂತ್, ಶಿವಮೊಗ್ಗದ ಎಂ.ಪೃಥ್ವಿರಾಜ್, ತುಮಕೂರಿನ ಕೆ.ಜೆ.ರಂಗನಾಥ. 4X100 ಮೀಟರ್ ರಿಲೇ: ಶಿವಮೊಗ್ಗ ಪ್ರಥಮ, ಕೋಲಾರ ದ್ವಿತೀಯ ಸ್ಥಾನ ಪಡೆಯಿತು. ಆಟಗಾರರಾದ ಎಂ.ಗೌತಮ್, ಡಿ.ವಿ.ಅಭಯ್, ಅಭಿಶೆಟ್ಟಿ, ನಿತೀಶ್ ಶಿವಮೊಗ್ಗ ತಂಡದ ಗೆಲುವಿಗೆ ಕಾರಣರಾದರು. 4X400 ಮೀಟರ್ ರಿಲೇ: ಚಿತ್ರದುರ್ಗ ತಂಡ ಪ್ರಥಮ ಸ್ಥಾನ ಪಡೆದರೆ, ತುಮಕೂರು ತಂಡ ಎರಡನೇ ಸ್ಥಾನ ಪಡೆಯಿತು. ಟಿ.ಲೋಹಿಯಾ, ಪಿ.ಪ್ರೀತಮ್, ಪಿ.ವಿ.ಸಂದೀಪ್, ಕೆ.ಬಿ.ಸುನೀಲ್ ಚಿತ್ರದುರ್ಗ ತಂಡದಲ್ಲಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.