ಫುಟ್‌ಬಾಲ್‌: ಬಿಎಫ್‌ಸಿ ತಂಡಕ್ಕೆ ಜಯ ಬೆಂಗಳೂರು: ಬಿಎಫ್‌ಸಿ ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1ರಿಂದ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವನ್ನು ಮಣಿಸಿತು. ಗುರುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಪರ ಪಿ. ಅಂಕಿತ್‌ (13ನೇ ನಿ.), ಓನಮ್ ರೋನೆಕ್ಸ್ (83ನೇ) ತಲಾ ಒಂದು ಗೋಲು ಗಳಿಸಿದರು. ಆರಿಫ್‌ ಶೇಖ್‌ (45+1ನೇ) ಸ್ಪೋರ್ಟಿಂಗ್‌ ಕ್ಲಬ್‌ ಪರ ಒಂದು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಅಗ್ನಿಪುತ್ರ ತಂಡವು 6–2ರಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡವನ್ನು ಸೋಲಿಸಿತು. ಅಗ್ನಿಪುತ್ರ ತಂಡದ ಒಮೆಗಾ ವನ ಲಾಲ್‌ಹ್ರುಐತ್ಲುಂಗಾ (29, 66ನೇ) ಮತ್ತು ನಿಖಿಲ್‌ ರಾಜ್‌ (87, 90+7ನೇ) ತಲಾ ಎರಡು ಗೋಲು ಗಳಿಸಿ ಮಿಂಚಿದರು. ಎಂ. ರಾಹುಲ್‌ (30ನೇ), ಲಾಲ್ನುಂಜಮಾ (69) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಇಂಡಿಪೆಂಡೆಂಟ್ಸ್‌ ತಂಡದ ಪರ ಆರ್‌. ಶಿವಕುಮಾರ್‌ (11), ಸತೀಶ್‌ ಕುಮಾರ್‌ (74) ತಲಾ ಒಂದು ಗೋಲು ತಂದಿತ್ತರು. ಇಂದಿನ ಪಂದ್ಯಗಳು ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ– ಕೊಡಗು ಎಫ್‌ಸಿ (ಮಧ್ಯಾಹ್ನ 1.30) ರೆಬೆಲ್ಸ್‌ ಎಫ್‌ಸಿ– ಯಂಗ್‌ ಚಾಲೆಂಜರ್ಸ್‌ ಎಫ್‌ಸಿ (3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.