ಮಹಿಳಾ ಕ್ರಿಕೆಟ್‌: ರಾಜ್ಯ ತಂಡಕ್ಕೆ ವೇದಾ ಕೃಷ್ಣಮೂರ್ತಿ ಸಾರಥ್ಯ ಬೆಂಗಳೂರು: ವೇದಾ ಕೃಷ್ಣಮೂರ್ತಿ ಅವರು ಗುಜರಾತ್‌ನ ವಡೋದರದಲ್ಲಿ ಅ.19ರಿಂದ 30ರ ವರೆಗೆ ನಡೆಯುವ ಬಿಸಿಸಿಐ ಮಹಿಳಾ ಟಿ20 ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು 15 ಆಟಗಾರ್ತಿಯರ ರಾಜ್ಯ ತಂಡವನ್ನು ಶುಕ್ರವಾರ ಪ್ರಕಟಿಸಿದೆ. ತಂಡ ಹೀಗಿದೆ: ವೇದಾ ಕೃಷ್ಣಮೂರ್ತಿ (ನಾಯಕಿ), ಶ್ರೇಯಾಂಕಾ ಆರ್‌. ಪಾಟೀಲ್‌ (ಉಪ ನಾಯಕಿ), ದಿವ್ಯಾ ಜ್ಞಾನಾನಂದ, ವೃಂದಾ ದಿನೇಶ್, ರೋಶಿನಿ ಕಿರಣ್‌, ಪ್ರತ್ಯೂಷಾ ಕುಮಾರ್ (ವಿಕೆಟ್‌ ಕೀಪರ್‌), ಸಿ. ಪ್ರತ್ಯೂಷಾ, ಶಿಶಿರಾ ಎ. ಗೌಡ, ಪುಷ್ಪಾ ಕಿರೇಸೂರು, ಸಹನಾ ಎಸ್‌. ಪವಾರ್‌, ಜಿ.ಆರ್‌. ಪ್ರೇರಣಾ, ಚಾಂದಸಿ ಕೃಷ್ಣಮೂರ್ತಿ, ಸಂಜನಾ ಎಚ್‌. ಬಾಟ್ನಿ (ವಿಕೆಟ್‌ ಕೀಪರ್‌), ರಾಜೇಶ್ವರಿ ಗಾಯಕ್‌ವಾಡ್, ಪಿ. ರೋಹಿತಾ ಚೌದರಿ. ವಿ.ಆರ್‌. ವನಿತಾ (ಕೋಚ್‌), ಸುನೀತಾ ಅನಂತಕೃಷ್ಣನ್ (ಮ್ಯಾನೇಜರ್‌), ಮೃದು ಗೌತಮ್ (ಫಿಜಿಯೊ), ಬಿ. ಹರ್ಷಿಣಿ (ಸ್ಟ್ರೆಂಥ್ ಆ್ಯಂಡ್ ಕಂಡಿಷನಿಂಗ್ ಕೋಚ್‌), ಮಾಲಾ ರಂಗಸ್ವಾಮಿ (ವಿಡಿಯೊ ಅನಾಲಿಸ್ಟ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.