ಟಿಟಿ: ಯಶಸ್ವಿನಿಗೆ ಕಿರೀಟ ಬೆಂಗಳೂರು: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ದೋಹಾದಲ್ಲಿ ನಡೆದ ವಿಶ್ವ ಟೇಬಲ್‌ ಟೆನಿಸ್‌ (ಡಬ್ಲ್ಯುಟಿಟಿ) ಯೂತ್‌ ಸ್ಟಾರ್‌ ಕಂಟೆಂಡರ್‌ ಟೂರ್ನಿಯನ್ನು ಗೆದ್ದುಕೊಂಡರು. ಭಾನುವಾರ ನಡೆದ ಫೈನಲ್‌ನಲ್ಲಿ ಬೆಂಗಳೂರಿನ 18 ವರ್ಷದ ಆಟಗಾರ್ತಿ 7-11, 15-13, 11-5, 8-11, 11-9 ರಿಂದ ಚೀನಾದ ಯುನಾ ಒಜಿಯೊ ಅವರನ್ನು ಮಣಿಸಿದರು. ಡಬ್ಲ್ಯುಟಿಟಿ ಸ್ಟಾರ್‌ ಕಂಟೆಂಡರ್‌ ಟೂರ್ನಿಯ 19 ವರ್ಷದೊಳಗಿನ ವಿಭಾಗದಲ್ಲಿ ಚಾಂಪಿಯನ್‌ ಆದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವ ಅವರಿಗೆ ಒಲಿಯಿತು. ಯಶಸ್ವಿನಿ ಮತ್ತು ಸುಹಾನಾ ಸೈನಿ ಜೋಡಿ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ 3-11, 11-4, 5-11, 11-8, 9-11 ರಿಂದ ಚೀನಾದ ಗಾವೊ ಯುಕ್ಸಿನ್‌– ಲಿಯು ಕ್ಸಿನ್‌ರಾನ್‌ ಎದುರು ಸೋತು ಕಂಚು ತನ್ನದಾಗಿಸಿಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.