ಏಷ್ಯನ್‌ ಕ್ರೀಡಾಕೂಟ: ರಿಲಯನ್ಸ್‌ ಫೌಂಡೇಷನ್‌ ಕ್ರೀಡಾಪಟುಗಳ ಸಾಧನೆ ಮುಂಬೈ: ರಿಲಯನ್ಸ್‌ ಫೌಂಡೇಷನ್‌ ಜತೆ ಗುರುತಿಸಿಕೊಂಡಿರುವ ಕ್ರೀಡಾಪಟುಗಳು ಚೀನಾದ ಹಾಂಗ್‌ಝೌನಲ್ಲಿ ಭಾನುವಾರ ಕೊನೆಗೊಂಡ ಏಷ್ಯನ್‌ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಈ ಕೂಟದಲ್ಲಿ ಭಾರತ 107 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಇದರಲ್ಲಿ ರಿಲಯನ್ಸ್‌ ಫೌಂಡೇಷನ್‌ನ ಅಥ್ಲೀಟ್‌ಗಳು ಗೆದ್ದ 12 ಪದಕಗಳೂ ಸೇರಿವೆ. ‘ಜ್ಯೋತಿ ಯರ‍್ರಾಜಿ, ಕಿಶೋರ್‌ ಕುಮಾರ್‌ ಜೇನಾ ಮತ್ತು ಪಲಕ್‌ ಗುಲಿಯಾ ಸೇರಿದಂತೆ ಫೌಂಡೇಷನ್‌ ಜತೆ ಗುರುತಿಸಿಕೊಂಡಿರುವ ಅಥ್ಲೀಟ್‌ಗಳು ಉತ್ತಮ ಸಾಧನೆ ತೋರಿ ಪದಕ ಗೆದ್ದಿದ್ದಾರೆ. ಈ ಕೂಟದಲ್ಲಿ 100ಕ್ಕೂ ಅಧಿಕ ಪದಕ ಗೆದ್ದಿರುವ ಭಾರತ ತಂಡಕ್ಕೆ ಅಭಿನಂದನೆಗಳು. ನಮ್ಮ ಫೌಂಡೇಷನ್‌ ಸದಾ ಭಾರತ ತಂಡದ ಜತೆಗಿದೆ’ ಎಂದು ರಿಲಯನ್ಸ್‌ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷರಾದ ನೀತಾ ಅಂಬಾನಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.