ಹ್ಯಾಮರ್ ಎಸೆತ: ಹೇಮಂತ್ ಕುಮಾರ್‌ಗೆ ಬೆಳ್ಳಿ ದಾಬಸ್ ಪೇಟೆ: ತೆಲಂಗಾಣದ ವಾರಂಗಲ್‌ನಲ್ಲಿ ಅ.16ರಿಂದ 18ರವರೆಗೆ ನಡೆದ 34ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹ್ಯಾಮರ್ ಎಸೆತ ವಿಭಾಗದಲ್ಲಿ ತಾಲ್ಲೂಕಿನ ನರಸೀಪುರ ಗ್ರಾಮದ ಹೇಮಂತ್ ಕುಮಾರ್ ಎಂ. ಬೆಳ್ಳಿ ಪದಕ ಪಡೆದಿದ್ದಾರೆ. ಅವರು 53.34 ಮೀ. ದೂರ ಎಸೆದಿದ್ದರು. ನವೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ರಾಜ್ಯ ಮಟ್ಟದ ಜೂನಿಯರ್ ಆಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 16 ವರ್ಷದೊಳಗಿನ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ 53.93ಮೀ. ದೂರ ಎಸೆದು ಚಿನ್ನದ ಪದಕ ಹಾಗೂ ಡಿಸ್ಕಸ್ ಎಸೆತದಲ್ಲಿ 36.57 ಮೀ ದೂರ ಎಸೆದು ಬೆಳ್ಳಿ ಪದಕ ಪಡೆದು ಗಮನ ಸೆಳೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.