ಪ್ರೊ ಕಬಡ್ಡಿ: ಡಿ.8 ರಿಂದ ಬೆಂಗಳೂರು ಲೆಗ್ ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 10ನೇ ಆವೃತ್ತಿಯ ಟೂರ್ನಿಯು ಡಿ.2 ರಂದು ಆರಂಭವಾಗಲಿದೆ. ಈ ಬಾರಿ ಎಲ್ಲ ಫ್ರಾಂಚೈಸ್‌ಗಳ ತವರು ನೆಲದಲ್ಲಿ ಪಂದ್ಯಗಳು ಆಯೋಜನೆಯಾಗಿವೆ. ಮೊದಲ ಲೆಗ್‌ನ ಪಂದ್ಯಗಳು ಅಹಮದಾಬಾದ್‌ನಲ್ಲಿ ಡಿ.2 ರಿಂದ 7ರ ವರೆಗೆ ನಡೆಯಲಿದ್ದರೆ, ಎರಡನೇ ಲೆಗ್‌ನ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಡಿ.8 ರಿಂದ 13ರ ವರೆಗೆ ಆಯೋಜನೆಯಾಗಿವೆ. ಡಿ.2 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ಮತ್ತು ತೆಲುಗು ಟೈಟನ್ಸ್‌ ತಂಡಗಳು ಎದುರಾಗಲಿವೆ. ಬೆಂಗಳೂರು ಬುಲ್ಸ್‌ ತಂಡ ಡಿ.3 ರಂದು ಗುಜರಾತ್‌ ಜೈಂಟ್ಸ್‌ ವಿರುದ್ಧದ ಪಂದ್ಯದೊಂದಿಗೆ ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸಲಿದೆ. ಬೆಂಗಳೂರು ಲೆಗ್‌ನ ಬಳಿಕ ಕ್ರಮವಾಗಿ ಪುಣೆ (ಡಿ.15–20), ಚೆನ್ನೈ (ಡಿ.22–27), ನೋಯ್ಡಾ (ಡಿ.29– ಜ.3, 2024), ಮುಂಬೈ (ಜ.5–10), ಜೈಪುರ (ಜ.12–17), ಹೈದರಾಬಾದ್ (ಜ.19–24), ಪಟ್ನಾ (ಜ.26–31), ದೆಹಲಿ (ಫೆ. 2–7), ಕೋಲ್ಕತ್ತ (ಫೆ.9–14), ಪಂಚಕುಲದಲ್ಲಿ (ಫೆ.16–21) ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.