ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಾತ್ವಿಕ್‌– ಚಿರಾಗ್ ರೆನ್‌, ಫ್ರಾನ್ಸ್‌ (ಪಿಟಿಐ): ವಿಶ್ವದ ಅಗ್ರ ರ್‍ಯಾಂಕ್‌ನ ಜೋಡಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಫ್ರೆಂಚ್‌ ಓಪನ್‌ ಸೂಪರ್ ಸೀರಿಸ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಮಂಗಳವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ 35 ನಿಮಿಷಗಳ ಹೋರಾಟದಲ್ಲಿ 21–13, 21–13 ರಿಂದ ಲೂಕಾಸ್ ಕೊರ್ವಿ– ರೊನನ್ ಲೆಬರ್‌ ಅವರನ್ನು ಮಣಿಸಿತು. ಮುಂದಿನ ಸುತ್ತಿನಲ್ಲಿ ಅವರು ಮೂರು ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಇಂಡೊನೇಷ್ಯಾದ ಮೊಹಮ್ಮದ್‌ ಅಹ್ಸನ್ ಮತ್ತು ಹೆಂದ್ರಾ ಸತಿಯವಾನ್‌ ವಿರುದ್ಧ ಹಣಾಹಣಿ ನಡೆಸುವರು. ಸಿಂಧುಗೆ ಜಯ: ಪಿ.ವಿ. ಸಿಂಧು ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ12–21, 21–18, 21–15 ರಿಂದ ಏಳನೇ ಶ್ರೇಯಾಂಕದ ಆಟಗಾರ್ತಿ ಇಂಡೊನೇಷ್ಯಾದ ಗ್ರೆಗೊರಿಯಾ ಮರಿಸ್ಕಾ ಅವರನ್ನು ಪರಾಭವಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.