ಪ್ಯಾರಾ ಏಷ್ಯನ್ ಗೇಮ್ಸ್‌: ರಕ್ಷಿತಾಗೆ ಚಿನ್ನ ಕೊಟ್ಟಿಗೆಹಾರ: ಜಿಲ್ಲೆಯ ಬಾಳೂರಿನ ಗುಡ್ನಳ್ಳಿ ನಿವಾಸಿ, ಅಂಧ ಓಟಗಾರ್ತಿ ರಕ್ಷಿತಾ ರಾಜು ಅವರು ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್‌ನ ಮಹಿಳೆಯರ 1500 ಮೀಟರ್ಸ್‌ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಬುಧವಾರ ನಡೆದ ಟಿ–11 ವಿಭಾಗದ ಓಟದಲ್ಲಿ ಅವರು 5 ನಿಮಿಷ 21.45 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 5 ನಿಮಿಷ 48.85 ಸೆಕೆಂಡುಗಳಲ್ಲಿ ಓಟ ಪೂರ್ತಿ ಮಾಡಿದ ಕಿಲ್ಲಕ ಲಲಿತಾ, ಬೆಳ್ಳಿ ಪದಕ ಗಳಿಸಿ ಭಾರತ ಪಾಳಯದಲ್ಲಿ ‘ಡಬಲ್’ ಸಂಭ್ರಮಕ್ಕೆ ಕಾರಣರಾದರು. ಕಿರ್ಗಿಸ್ತಾನದ ಜುಬೇವಾ ಗುಲ್ನಜ್ ತೃತೀಯ ಸ್ಥಾನ ಗಳಿಸಿದರು. ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ರಕ್ಷಿತಾ ಅವರ ಕೋಚ್ ರಾಹುಲ್ ಬಾಲಕೃಷ್ಣ ಅವರು ಸಂತಸ ವ್ಯಕ್ತಪಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.