ನೆಟ್‌ಬಾಲ್‌: ರಾಜ್ಯ ಮಹಿಳೆಯರ ತಂಡಕ್ಕೆ ಬೆಳ್ಳಿ ಬೆಂಗಳೂರು: ಕರ್ನಾಟಕದ ಮಹಿಳೆಯರ ನೆಟ್‌ಬಾಲ್‌ ತಂಡವು ಗೋವಾದಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದೆ. ಬುಧವಾರ ನಡೆದ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ವನಿತೆಯರು ಹರಿಯಾಣ ತಂಡಕ್ಕೆ ತೀವ್ರ ಪೈಪೋಟಿ ನೀಡಿದರು. 52–56ರಿಂದ ಗೆದ್ದ ಹರಿಯಾಣ ಚಿನ್ನದ ಪದಕ ಜಯಿಸಿತು. 4 ಪಾಯಿಂಟ್‌ನಿಂದ ಸೋತ ಕರ್ನಾಟಕ ರನ್ನರ್‌ ಅ‍ಪ್‌ ಸ್ಥಾನ ಪಡೆಯಿತು. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು ತೆಲಂಗಾಣ ತಂಡವನ್ನು 72–26ರಿಂದ ಮಣಿಸಿ ಫೈನಲ್‌ ಪ್ರವೇಶಿಸಿತ್ತು. ಮಾನಸಾ ನಾಯಕತ್ವದ ತಂಡದಲ್ಲಿ ಗಗನಾ, ನಂದಿನಿ, ಶಿವಲೀಲಾ, ಶಾಲಿನಿ, ಹರ್ಷಿತಾ, ಸುರಭಿ, ರೋಷನಿ, ಸ್ವಾತಿ, ಮನಸ್ವಿ, ದೀಪಾ, ಮೇಘನಾ ಇದ್ದರು. ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ 36ನೇ ವರ್ಷದ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ರಾಜ್ಯದ ಮಹಿಳೆಯರ ನೆಟ್‌ಬಾಲ್‌ ತಂಡವು ಕಂಚಿನ ಪದಕ ಗೆದ್ದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.