ಟಿಟಿ: ಯಶವಂತ್‌ಗೆ ಕಂಚು ಬೆಂಗಳೂರು: ಪಿ. ಯಶವಂತ್‌ ಅವರು ತಿರುವನಂತಪುರದಲ್ಲಿ ನಡೆದ ಅಖಿಲ ಭಾರತ ಯುಟಿಟಿ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ಪಶ್ಚಿಮ ಬಂಗಾಲದ ಅಂಕುರ್ ಭಟ್ಟಾಚಾರ್ಯ ವಿರುದ್ಧ 11-8, 6-11, 6-11, 13-11, 11-13 ರಿಂದ ಪರಾಭವಗೊಂಡ ಯಶವಂತ್ ಕಂಚಿಗೆ ತೃಪ್ತಿಪಟ್ಟುಕೊಂಡರು. ಇದಕ್ಕೂ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಮಹಾರಾಷ್ಟ್ರದ ಜಶ್ ಮೋದಿ ಅವರನ್ನು 6-11, 11-7, 12-10, 10-12, 11-2ರಿಂದ, ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶದ ಶ್ರೀಧರ ಜೋಶಿ ಅವರನ್ನು 11-7, 11-8, 8-11, 16-14 ರಿಂದ ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.