ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಎಸ್‌ಎಐ ಧಾರವಾಡಕ್ಕೆ ಜಯ ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಎಸ್‌ಎಐ ಧಾರವಾಡ ತಂಡದವರು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಸೋಮವಾರ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದರು. ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧಾರವಾಡ ತಂಡ 54–43 ರಿಂದ ಬೆಳಗಾವಿ ಬಿ.ಸಿ ತಂಡವನ್ನು ಮಣಿಸಿತು. ಅಭಿಷೇಕ್‌ (16) ಮತ್ತು ಸೂರಜ್ (10) ಅವರು ಗೆಲುವಿನಲ್ಲಿ ಗಮನ ಸೆಳೆದರು. ಜಿದ್ದಾಜಿದ್ದಿನ ಸೆಣಸಾಟ ನಡೆದ ಎರಡನೇ ಪಂದ್ಯದಲ್ಲಿ 62–60 ರಿಂದ ಕೆಜಿಎಫ್‌ ಬಿ.ಸಿ ತಂಡವನ್ನು ಸೋಲಿಸಿತು. ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ ಕ್ರಮವಾಗಿ ಹೆಬ್ಬಾಳ ಬಿ.ಸಿ (61–29) ಮತ್ತು ಚಿಕ್ಕಮಗಳೂರಿನ ಡಾಮಿನೆಂಟ್ಸ್‌ ಬಿ.ಸಿ (56–21) ತಂಡಗಳನ್ನು ಮಣಿಸಿತು. ಇತರ ಪಂದ್ಯಗಳಲ್ಲಿ ಐಬಿಬಿಸಿ 56–46 ರಿಂದ ಬಿಎಸ್‌ಎನ್‌ಎಲ್‌ ವಿರುದ್ದ; ಸದರ್ನ್‌ ಬ್ಲೂಸ್ 69–50 ರಿಂದ ಆಲ್‌ ಸ್ಟಾರ್ ಮೈಸೂರು ವಿರುದ್ದ; ವಿವೇಕ್ಸ್‌ ಸ್ಪೋರ್ಟ್ಸ್‌ ಕ್ಲಬ್‌ 89–52 ರಿಂದ ಚಿಕ್ಕಬಳ್ಳಾಪುರದ ಎಂ.ವಿ.ಡೈಮಂಡ್‌ ಬಿ.ಸಿ ವಿರುದ್ಧ; ಭಾರತ್‌ ಸ್ಪೋರ್ಟ್ಸ್‌ ಯೂನಿಯನ್‌ 87–29 ರಿಂದ ಕೋಲಾರದ ವೈಎಫ್‌ಬಿಸಿ ವಿರುದ್ಧ; ಯಂಗ್‌ ಓರಿಯನ್ಸ್ 93–38 ರಿಂದ ಕನಕ ಕೋಲಾರ ವಿರುದ್ಧವೂ ಜಯ ಸಾಧಿಸಿದವು. ಮಹಿಳೆಯರ ವಿಭಾಗದ ಪಂದ್ಯಗಳಲ್ಲಿ ನಿಟ್ಟೆಯ ಕೆ.ಎಸ್‌.ಹೆಗ್ಡೆ ತಂಡ 59–13 ರಿಂದ ಅಪ್ಪಯ್ಯ ಬಿ.ಸಿ ತಂಡವನ್ನು ಮಣಿಸಿದರೆ, ಬೀಗಲ್ಸ್‌ ತಂಡ 43–23 ರಿಂದ ಡಿವೈಇಎಸ್‌ ವಿಜಯಪುರ ತಂಡವನ್ನು ಪರಾಭವಗೊಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.