ಟೇಬಲ್‌ ಟೆನಿಸ್‌ ಟೂರ್ನಿ: ಯುಕ್ತಾ, ಸಾತ್ವಿಕ್‌ ಚಾಂಪಿಯನ್‌ ಬೆಂಗಳೂರು: ಯುಕ್ತಾ ಹರ್ಷ ಮತ್ತು ಎಂ. ಸಾತ್ವಿಕ್‌ ಅವರು ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ 25ನೇ ಎಂ.ಎಸ್‌. ರಾಮಯ್ಯ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್‌ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಮಂಗಳವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಯುಕ್ತಾ 11-13, 11-4, 11-6, 11-8 ರಿಂದ ಮಿಹಿಕಾ ಆರ್. ಉಡುಪ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಮಹಿಕಾ 11-6, 11-8, 11-9ರಿಂದ ಆರ್. ಇತಿಹಾ ಅವರನ್ನು; ಯುಕ್ತಾ 11-6, 5-11, 11-6, 8-11, 11-5 ರಿಂದ ಲಕ್ಷ್ಮಿ ಆಶ್ರಿತಾ ಅವರನ್ನು ಸೋಲಿಸಿದ್ದರು. ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಸಾತ್ವಿಕ್‌ 8-11, 11-7, 11-9, 10-12, 12-10ರಿಂದ ಎಂ ಸಿದ್ಧಾಂತ್‌ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ಸಿದ್ಧಾಂತ್‌ 11-9, 11-7 , 8-11, 11-8ರಿಂದ ಸುದರ್ಶನ್‌ ಎ.ರಾಜ್‌ ಅವರನ್ನು; ಸಾತ್ವಿಕ್‌ 7-11, 11-9, 11-8, 11-7ರಿಂದ ಅಂಕುಶ್‌ ಬಾಳಿಗಾ ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.