ಚೆಸ್‌: ವಿದಿತ್‌ಗೆ ಎರಡನೇ ಗೆಲುವು ಐಲ್‌ ಆಫ್‌ ಮ್ಯಾನ್ (ಯುಕೆ): ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಗುಜರಾತಿ ಅವರು ಫಿಡೆ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದರು. ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ತಮ್ಮ ತಾಂತ್ರಿಕ ಕೌಶಲ ಮೆರೆದ ವಿದಿತ್, ಜರ್ಮನಿಯ ದಿಮಿತ್ರಿ ಕೊಲರ್ಸ್‌ ಅವರನ್ನು ಮಣಿಸಿದರು. ಮೊದಲ ಪಂದ್ಯದಲ್ಲಿ ಸೋತಿದ್ದ ವಿದಿತ್‌, ಎರಡನೇ ಪಂದ್ಯದಲ್ಲಿ ಸ್ವದೇಶದ ಅಭಿಜಿತ್‌ ಗುಪ್ತಾ ಅವರನ್ನು ಪರಾಭವಗೊಳಿಸಿದ್ದರು. ಇನ್ನೊಂದು ಪಂದ್ಯದಲ್ಲಿ ಅರ್ಜುನ್‌ ಇರಿಗೇಶಿ ಅವರು ಸರ್ಬಿಯದ ಅಲೆಕ್ಸಿ ಸರಾನ ಅವರೊಂದಿಗೆ ಡ್ರಾ ಮಾಡಿಕೊಂಡರು. ಮಹಿಳೆಯರ ವಿಭಾಗದಲ್ಲಿ ಆರ್‌.ವೈಶಾಲಿ ಚಾಣಾಕ್ಷ ನಡೆಗಳ ಮೂಲಕ ಲೆಯಾ ಗರಿಫುಲಿನಾ ಅವರನ್ನು ಸೋಲಿಸಿದರು. 2.5 ಪಾಯಿಂಟ್ಸ್‌ಗಳೊಂದಿಗೆ ಅವರು ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.