ಸಂಜಯ್‌, ಹರಿಪ್ರಿಯಾ ಮಿಂಚಿನ ಓಟ ಉಡುಪಿ: ಶಿವಮೊಗ್ಗದ ಸಂಜಯ್ ಮತ್ತು ಬೆಂಗಳೂರು ಉತ್ತರದ ಹರಿಪ್ರಿಯಾ, ಗುರುವಾರ ಆರಂಭಗೊಂಡ 14 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್‌ ಕೂಟದಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ 200 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಶಾಲಾ‌ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಸೇಂಟ್ ಸಿಸಿಲಿಸ್ ಶಾಲೆ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಬಾಲಕರ ವಿಭಾಗದ 200 ಮೀಟರ್ಸ್ ಓಟದಲ್ಲಿ ಬಳ್ಳಾರಿಯ ಅಜಿತ್ ಕುಮಾರ್ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಜಯ್‌ ನಾಯ್ಕ್ ಅವರ ಸವಾಲು ಮೀರಿದ ಸಂಜಯ್ 24.7 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಬಾಲಕಿಯರ ವಿಭಾಗದಲ್ಲಿ ಹರಿಪ್ರಿಯಾ 27 ಸೆಕೆಂಡುಗಳಲ್ಲಿ ಗುರಿ ತಲುಪಿದರು. ವಿದ್ಯಾನಗರ ಕ್ರೀಡಾಶಾಲೆಯ ಮಿತಾ ಮತ್ತು ಲಕ್ಷ್ಮಿ ಅವರು ಹರಿಪ್ರಿಯಾಗೆ ತೀವ್ರ ಪೈಪೋಟಿ ಒಡ್ಡಿದರು. ಆದರೆ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಫಲಿತಾಂಶಗಳು: 200 ಮೀಟರ್ಸ್ ಓಟ: ಸಂಜಯ್‌ (ಶಿವಮೊಗ್ಗ)–1. ಕಾಲ:24.7ಸೆ, ಅಜಿತ್ ಕುಮಾರ್ ಎಸ್‌ (ಬಳ್ಳಾರಿ)–2, ರೋಷನ್‌ ಸಂಜಯ್ ನಾಯ್ಕ್ (ಚಿಕ್ಕೋಡಿ)–3; 600 ಮೀ: ಅಜಯ್‌ ಪ್ರಥ್ವಿರಾಜ್‌ (ಮೈಸೂರು)–1. ಕಾಲ: 1ನಿ 30.8ಸೆ, ನವೀನ್‌ ಕುಮಾರ್ (ವಿದ್ಯಾನಗರ ಕ್ರೀಡಾಶಾಲೆ ಬೆಂಗಳೂರು)–2, ನಿಹಾಲ್ ವಿ.ಕರ್ಕೆರ (ದಕ್ಷಿಣ ಕನ್ನಡ)–3; 80 ಮೀ ಹರ್ಡಲ್ಸ್‌: ಆರಂಭಮ್‌ ರಾಜು ಸಿಂಗ್‌ (ದಕ್ಷಿಣ ಕನ್ನಡ)–1. ಕಾಲ:12ಸೆ, ಬಿಕ್ರಮ್‌ಜೀತ್‌ ಸಿಂಗ್ (ಬಳ್ಳಾರಿ)–2, ಅಮಿತ್ ಜಾಧವ್‌ (ಧಾರವಾಡ)–3; ಲಾಂಗ್‌ ಜಂಪ್‌: ಸುರೇಶ್‌ ವೈ.ಎಂ (ಬಳ್ಳಾರಿ)–1, ಅಂತರ: 5.45 ಮೀ, ಎಚ್‌.ಡಿ.ಚರಣ್‌ (ಹಾಸನ)–2, ಬಿ.ಸಿ.ಲೋಹಿತ್ ಗೌಡ (ಮಂಡ್ಯ)–3; ಶಾಟ್‌ಪಟ್‌: ಪ್ರಸನ್ನ ಪಿ.ಬಣಗಾರ್‌ (ಚಿಕ್ಕೋಡಿ)–1. ದೂರ: 12.76 ಮೀ, ಕೃಷ್ಣ ತೋಟದ (ಬೆಳಗಾವಿ)–2, ಲೋಹಿತ್ ಗೌಡ ಬಿ.ಸಿ (ಮಂಡ್ಯ)–3. ಬಾಲಕಿಯರ 200 ಮೀ: ಹರಿಪ್ರಿಯಾ (ಬೆಂಗಳೂರು ಉತ್ತರ)–1. ಕಾಲ: 27ಸೆ, ಮಿತಾ (ವಿದ್ಯಾನಗರ ಕ್ರೀಡಾಶಾಲೆ ಬೆಂಗಳೂರು)–2, ಲಕ್ಷ್ಮಿ (ವಿದ್ಯಾನಗರ ಕ್ರೀಡಾಶಾಲೆ ಬೆಂಗಳೂರು)–3; 600 ಮೀ: ಗೌರಿ ಪೂಜಾರಿ (ಬೆಳಗಾವಿ)–1. ಕಾಲ:1 ನಿ 43.8 ಸೆ, ಶ್ವೇತಾ ಬಡಿಗೇರ್‌ (ಧಾರವಾಡ)–2, ಎನ್‌.ದಿವ್ಯಾ (ರಾಮನಗರ)–3; 80 ಮೀಟರ್ ಹರ್ಡಲ್ಸ್‌: ಸಿ.ಚಿಂತನಾ (ದಕ್ಷಿಣ ಕನ್ನಡ)–1. ಕಾಲ: 14.6 ಸೆ, ಶಿವಾನಿ ಸಚಿನ್ ಬಿವಾಸೆ (ಚಿಕ್ಕೋಡಿ)–2, ನಿಧಿಶ್ರೀ.ಕೆ (ದಕ್ಷಿಣ ಕನ್ನಡ)–3; ಲಾಂಗ್‌ಜಂಪ್‌: ರಾಯ್‌ವೆನ್ ತೆರೆಸಿರ (ಬೆಂಗಳೂರು ಉತ್ತರ)–1. ಅಂತರ: 4.66 ಮೀ, ಜ್ಞಾನೇಶ್ವರಿ (ಹಾಸನ)–2, ಆರ್‌.ವಿ.ಪ್ರಾಪ್ತಿ (ಚಿಕ್ಕಮಗಳೂರು)–3; ‌ಡಿಸ್ಕಸ್‌ ಥ್ರೋ: ಎಪ್ಸೆನೆಜರ್ ಜಾಸ್ಮಿನ್‌ (ಬಳ್ಳಾರಿ)–1. ದೂರ: 25.48 ಮೀ, ಅಂಕಿತಾ (ಬಳ್ಳಾರಿ)–2, ನೇಹಾ (ಬೆಂಗಳೂರು ಗ್ರಾಮಾಂತರ)–3; ಹೈಜಂಪ್‌: ಜೆ.ಎಂ.ಕೀರ್ತಿ (ದಕ್ಷಿಣ ಕನ್ನಡ)–1, ಎತ್ತರ: 1.40 ಮೀ, ಬಿ.ಆವನಿ (ದಕ್ಷಿಣ ಕನ್ನಡ)–2, ಕೀರ್ತಿ ಗೌಡ (ಶಿರಸಿ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.