1500 ಮೀ. ಓಟ: ಪೃಥ್ವಿರಾಜ್‌, ನಿಧಿಗೆ ಪ್ರಶಸ್ತಿ ಮೈಸೂರು: ಕಡೂರು ಸರ್ಕಾರಿ ಪಾಲಿಟೆಕ್ನಿಕ್‌ನ ಡಿ.ಎನ್. ಪೃಥ್ವಿರಾಜ್‌ ಹಾಗೂ ನಿಟ್ಟೆಯ ಎನ್‌ಆರ್‌ಎಎಂನ ನಿಧಿ ಅವರು ಗುರುವಾರ ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯಮಟ್ಟದ 44ನೇ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ 1500 ಮೀಟರ್ಸ್ ಓಟದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅಗ್ರ ಪ್ರಶಸ್ತಿ ಗೆದ್ದರು. ಚೆಸ್‌ನ ಪುರುಷರ ವಿಭಾಗದಲ್ಲಿ ಚನ್ನಪಟ್ಟಣ ಸರ್ಕಾರಿ ಪಾಲಿಟೆಕ್ನಿಕ್‌ನ ಸಿ.ಪಿ. ನಿರೀಕ್ಷಿತ್‌ ಗೌಡ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಜೆಎಸ್‌ಎಸ್‌ ಪಾಲಿಟೆಕ್ನಿಕ್‌ನ ಎಸ್. ತನುಶ್ರೀ ಪದಕ ಗೆದ್ದರು. ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ರಾಜ್ಯದ 100ಕ್ಕೂ ಹೆಚ್ಚು ಪಾಲಿಟೆಕ್ನಿಕ್‌ಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಮೊದಲ ದಿನದ ಫಲಿತಾಂಶ: ಅಥ್ಲೆಟಿಕ್ಸ್‌: ಪುರುಷರು: 1500 ಮೀಟರ್ಸ್‌ ಓಟ: ಡಿ.ಎನ್. ಪೃಥ್ವಿರಾಜ್ (ಜಿಪಿಟಿ, ಕಡೂರು)–1, ಎಂ.ವಿ. ಕರುಣ್‌ (ಕೆವಿಜಿ ಪಾಲಿಟೆಕ್ನಿಕ್‌, ಸುಳ್ಯ)–2, ಎ. ಆಶೀಶ್‌ (ಜಿಪಿಟಿ, ಬೆಳಗಾವಿ)–3; ಶಾಟ್‌ಪಟ್‌: ಹೇಮಂತ ಗೌಡ (ಎಸ್‌ಜೆ ಪಾಲಿಟೆಕ್ನಿಕ್‌)–1, ಜೆಶ್ವಿನ್‌ ( ಎನ್‌ಆರ್‌ಎಎಂ, ನಿಟ್ಟೆ)–2, ವೈ.ಆರ್. ರೋಶನ್ (ಜಿಪಿಟಿ, ಕೆ.ಆರ್. ಪೇಟೆ)–3;ಜಾವೆಲಿನ್‌ ಥ್ರೋ: ಪೃಥ್ವಿರಾಜ್‌ ( ಕೆಪಿಟಿ ಮಂಗಳೂರು)–1, ಎಂ.ಜಿ. ಅಜಿತ್‌ (ಎಚ್‌ಎನ್‌ಪಿ)–2, ಚೇತನ್‌ (ಜಿಪಿಟಿ, ಬಂಟ್ವಾಳ)–3. ಮಹಿಳೆಯರು: 1500 ಮೀಟರ್ಸ್ ಓಟ; ನಿಧಿ ( ಎನ್‌ಆರ್‌ಎಎಂ, ನಿಟ್ಟೆ)–1, ಯೋಗಿನಿ (ಕೆಪಿಟಿ, ಮಂಗಳೂರು)–2, ಚೈತ್ರಾಲಿ (ಕೆವಿಜಿ ಪಾಲಿಟೆಕ್ನಿಕ್, ಸುಳ್ಯ)–3; ಹೈಜಂಪ್‌: ದೀಕ್ಷಾ ಗೌಡ (ಜಿಪಿಟಿ, ಕಾರವಾರ)–1, ಯು.ಜಿ. ಅನನ್ಯಾ ಪ್ರವೀಣ್‌ (ಮಹಿಳಾ ಪಾಲಿಟೆಕ್ನಿಕ್, ಮಂಗಳೂರು)–2, ಸ್ವಾತಿ ( ಎನ್‌ಆರ್‌ಎಎಂ, ನಿಟ್ಟೆ)–3. ಗುಂಪು ವಿಭಾಗ: ಪುರುಷರು: ಚೆಸ್‌: ಸಿ.ಪಿ. ನಿರೀಕ್ಷಿತ್‌ ಗೌಡ (ಜಿಪಿಟಿ, ಚನ್ನಪಟ್ಟಣ)–1, ಅರ್ಬಾಜ್‌ ಅಹಮ್ಮದ್ ಮುಲ್ಲಾ (ಗೊಮ್ಮಟೇಶ ಪಾಲಿಟೆಕ್ನಿಕ್, ಬೆಳಗಾವಿ)–2, ಕೆ. ನಾಗರಾಜು (ಜಿಪಿಟಿ, ಮುಂಡಗೋಡ)–3. ಮಹಿಳೆಯರು: ಚೆಸ್‌: ಎಸ್. ತನುಶ್ರೀ (ಜೆಎಸ್‌ಎಸ್‌ ಮಹಿಳಾ ಪಾಲಿಟೆಕ್ನಿಕ್‌)–1, ಆರ್‌.ಕೆ. ಸೌಖ್ಯ (ಗೊಮ್ಮಟೇಶ ಪಾಲಿಟೆಕ್ನಿಕ್, ಬೆಳಗಾವಿ)–2, ಡಿ. ಹರ್ಷಿತಾ (ವೆಂಕಟೇಶ್ವರ ಪಾಲಿಟೆಕ್ನಿಕ್‌)–3. ಟೆನಿಕಾಯ್ಟ್‌: ಸಿಂಗಲ್ಸ್‌: ಬೀಬಿ ಹಜಿರಾ (ಮಹಿಳಾ ಪಾಲಿಟೆಕ್ನಿಕ್‌, ಶಿರಾಳಕೊಪ್ಪ)–1, ಎಚ್‌.ಆರ್. ಕೀರ್ತನಾ (ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್‌)–2. ಟೆನಿಕಾಯ್ಟ್‌ ಡಬಲ್ಸ್‌: ಬೀಬಿ ಹಜಿರಾ, ಎಸ್‌.ಬಿ. ಮಾನಸಾ (ಮಹಿಳಾ ಪಾಲಿಟೆಕ್ನಿಕ್‌, ಶಿರಾಳಕೊಪ್ಪ)–1, ಎನ್.ಜೆ. ವಿದ್ಯಶ್ರೀ, ಎಂ.ಸಿ. ಚೈತ್ರಾ (ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್‌)–2. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ 44ನೇ ರಾಜ್ಯ ಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ ಪುರುಷರ 100 ಮೀಟರ್ಸ್‌ ಓಟದಲ್ಲಿ (ಹೀಟ್ಸ್‌) ಗುರಿಯತ್ತ ಹೆಜ್ಜೆ ಇಟ್ಟ ಸ್ಪರ್ಧಿಗಳು ಪ್ರಜಾವಾಣಿ ಚಿತ್ರ: ಅನೂಪ್‌ ರಾಘ್‌ ಟಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.