ಹಾಕಿ | ಭಾರತಕ್ಕೆ ಮಣಿದ ಕೊರಿಯಾ ರಾಂಚಿ: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ ತಂಡವು ಗುರುವಾರ ದಕ್ಷಿಣ ಕೊರಿಯಾ ತಂಡವನ್ನು 5–0 ಗೋಲುಗಳಿಂದ ಮಣಿಸಿತು. ಈ ಮೂಲಕ ಲೀಗ್‌ ಹಂತದ ಎಲ್ಲ ಐದು ಪಂದ್ಯಗಳನ್ನು ಭಾರತ ಜಯ ದಾಖಲಿಸಿತು. ಭಾರತದ ಪರ ಸಲೀಮಾ (6ನೇ ಮತ್ತು 36ನೇ ನಿ), ನವನೀತ್ ಕೌರ್ (36ನೇ) ವಂದನಾ ಕಟಾರಿಯಾ (49ನೇ) ಮತ್ತು ನೇಹಾ (60ನೇ) ಗೋಲು ಗಳಿಸಿದರು. ಭಾರತ ತಂಡವು 15 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಮತ್ತೆ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಕೊರಿಯಾ ಏಳು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.