ಕೊಕ್ಕೊ: ರಾಜ್ಯ ತಂಡಕ್ಕೆ ಶ್ರೀಧರ್‌ ಕೋಚ್ ಕೋಲಾರ: ಕೋಲಾರದ ಆರ್‌.ಶ್ರೀಧರ್ ಗೋವಾದಲ್ಲಿ ನ.4 ರಿಂದ 8 ರವರೆಗ ನಡೆಯಲಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದ ಕರ್ನಾಟಕ ರಾಜ್ಯ ಪುರುಷರ ಕೊಕ್ಕೊ ತಂಡಕ್ಕೆ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಗುಜರಾತ್‌ನ ಅಹಮದಾಬಾದ್‌ನಲ್ಲಿ 2022ರಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದ ಪುರುಷರ ತಂಡದ ತರಬೇತುದಾರನಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯ ತಂಡದಲ್ಲಿ ಆಟಗಾರರಾದ ಪ್ರಜ್ವಲ್, ಗೌತಮ್, ಸುಹಾಸ್, ಮಹೇಶ, ದೀಕ್ಷಿತ್, ಚಿರಂಜೀವಿ, ನಾಗರಾಜ, ಪಿ.ಧನರಾಜ್, ಮೊಹಮದ್ ತಾಸೀನ್, ಶರತ್, ವಿ.ಮನು, ತಿಪ್ಪೇಸ್ವಾಮಿ, ಅರ್ಜುನ್, ಶಶಿಕುಮಾರ್, ಧನರಾಜ್ ಇದ್ದಾರೆ. ತಂಡಕ್ಕೆ ಸಹಾಯಕ ಕೋಚ್ ಆಗಿ ಓ.ಶ್ರೀನಿವಾಸ, ವ್ಯವಸ್ಥಾಪಕರಾಗಿ ಟಿ.ಎಸ್.ಸಿದ್ದಲಿಂಗಮೂರ್ತಿ ಕಾರ್ಯನಿರ್ವಹಿಸಲಿದ್ದಾರೆ. ಮಹಿಳಾ ತಂಡದಲ್ಲಿ ಮಾನ್ಯ, ಶೀತಲ್, ಚೈತ್ರಾ, ವೀಣಾ, ವಿನುತಾ, ಚಂದನಾ, ತೇಜಸ್ವಿನಿ, ಮೋನಿಕಾ, ಅಕ್ಷತಾ, ಪ್ರಕೃತಿ, ಪದ್ಮಾವತಿ, ದಿವ್ಯಾ, ನಳಿನಾ, ಮೇಘನಾ, ಮಹೇಶ್ವರಿ ಇದದಾರೆ. ಕೋಚ್ ಆಗಿ ರಾಮಲಿಂಗಪ್ಪ, ಸಹಾಯಕ ಕೋಚ್ ಆಗಿ ಚಂದ್ರಶೇಖರ್ ಹಾಗೂ ವ್ಯವಸ್ಥಾಪಕರಾಗಿ ಟಿ.ಸುಧಾ ನೇಮಕಗೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.