ಹಾಫ್‌ ಮ್ಯಾರಥಾನ್: ರಮೇಶ್‌, ಪ್ರಜಕ್ತಾ ಚಾಂಪಿಯನ್‌ ಹೈದರಾಬಾದ್‌: ತೆಲಂಗಾಣದ ಬಿ.ರಮೇಶ್‌ ಚಂದ್ರ ಮತ್ತು ಮಹಾರಾಷ್ಟ್ರದ ಪ್ರಜಕ್ತಾ ಗೋಡ್‌ಬೋಲೆ ಅವರು ಹೈದರಾಬಾದ್‌ ಹಾಫ್‌ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್‌ ಆದರು. ಭಾನುವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯನ್ನು (21.1 ಕಿ.ಮೀ ದೂರ) ರಮೇಶ್ 1 ಗಂಟೆ 13.10 ನಿ.ಗಳಲ್ಲಿ ಪೂರೈಸಿದರು. ಸತೀಶ್‌ ಕುಮಾರ್‌ (1 ಗಂ. 15:50 ನಿ.) ಮತ್ತು ಪೀಯೂಷ್‌ ಮಸಾನೆ (1 ಗಂ. 16.56 ನಿ.) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದ ಸ್ಪರ್ಧೆಯನ್ನು ಪ್ರಜಕ್ತಾ ಅವರು 1 ಗಂಟೆ 23.45 ನಿ.ಗಳಲ್ಲಿ ಕ್ರಮಿಸಿದರು. ಪ್ರೀನು ಯಾದವ್ (1 ಗಂ. 24.46 ನಿ.) ಮತ್ತು ತೇಜಸ್ವಿನಿ (1 ಗಂ. 25.11 ನಿ.) ಅವರು ಬಳಿಕದ ಸ್ಥಾನಗಳನ್ನು ಗಳಿಸಿದರು. 10ಕೆ ಓಟದಲ್ಲಿ ಚೇತನ್‌ ಕುಮಾರ್‌ (34 ನಿ. 21 ಸೆ.) ಮತ್ತು ಶೀಲು ಯಾದವ್ (41 ನಿ. 34 ಸೆ.) ಅವರು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.