ಆರ್ಯನ್‌ ಮೈಸೂರು ತಂಡಕ್ಕೆ ಗೆಲುವು ಬೆಂಗಳೂರು: ಶಕ್ತಿ (30) ಅವರ ಆಟದ ಬಲದಿಂದ ಆರ್ಯನ್‌ ಮೈಸೂರು ತಂಡವು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 88–83ರಿಂದ ಬಾಷ್‌ ಸ್ಪೋರ್ಟ್‌ ಕ್ಲಬ್‌ ತಂಡವನ್ನು ಮಣಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರ್ಯನ್‌ ತಂಡವು 5 ಪಾಯಿಂಟ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿತು. ಬಾಷ್‌ ತಂಡದ ಪವನ್‌ (21) ಅವರ ಆಟ ಗಮನ ಸೆಳೆಯಿತು. ಇತರ ಪಂದ್ಯಗಳಲ್ಲಿ ಭಾರತ್‌ ಎಸ್‌.ಯು 92–53ರಿಂದ ರೋವರ್ಸ್ ಧಾರವಾಡ ತಂಡವನ್ನು, ಡಿವೈಇಎಸ್‌ ಬೆಂಗಳೂರು 79–60ರಿಂದ ವಿಜಯನಗರ ಮೈಸೂರು ತಂಡವನ್ನು, ಜೆಎಸ್‌ಸಿ 64–27ರಿಂದ ಯಂಗ್‌ ಬುಲ್ಸ್‌ ತಂಡವನ್ನು, ದಾವಣಗೆರೆ ಬಿ.ಸಿ. 52–36ರಿಂದ ಯಂಗ್ ಚಾಲೆಂಜರ್ಸ್‌ ಮೈಸೂರು ತಂಡವನ್ನು, ವಿಬಿಸಿ ಮಂಡ್ಯ 70–51ರಿಂದ ದೇವಾಂಗ ತಂಡವನ್ನು, ಯಂಗ್ ಓರಿಯನ್ಸ್‌ 69–26ರಿಂದ ಹೊಯ್ಸಳ ಹಾಸನ ತಂಡವನ್ನು, ಎಂಎನ್‌ಕೆ ರಾವ್‌ 67–27ರಿಂದ ನ್ಯಾಷನಲ್‌ ಮೈಸೂರು ತಂಡವನ್ನು, ಬ್ಯಾಂಕ್‌ ಆಫ್‌ ಬರೋಡಾ 84–23ರಿಂದ ಮೇರಿಯನ್ಸ್ ಚಿಕ್ಕಮಗಳೂರು ತಂಡವನ್ನು, ಓರಿಯನ್ಸ್‌ 49–25ರಿಂದ ವೈಎಂಎಂಎ ತಂಡವನ್ನು ಪರಾಭವಗೊಳಿಸಿತು. ಮಹಿಳೆಯರ ವಿಭಾಗ: ಎಂಎನ್‌ಕೆ ರಾವ್ 44–35ರಿಂದ ನ್ಯಾಷನಲ್ಸ್‌ ಮೈಸೂರು ವಿರುದ್ಧ, ರಾಜ್‌ಮಹಲ್‌ 78–52ರಿಂದ ಸೌಥರ್ನ್ ಬ್ಲೂಸ್‌ ವಿರುದ್ಧ, ಡಿವೈಇಎಸ್‌ ಮೈಸೂರು 64–14ರಿಂದ ಕೋರಮಂಗಲ ವಿರುದ್ಧ, ಎಂಸಿಎಚ್‌ಎಸ್‌ 38–12ರಿಂದ ಮೈಸೂರು ಬಾಲರ್ಸ್‌ ವಿರುದ್ಧ, ಎಸ್‌.ಡಬ್ಲ್ಯು. ರೈಲ್ವೆ 93–36ರಿಂದ ದೇವಾಂಗ ವಿರುದ್ಧ, ಡಿವೈಇಎಸ್‌ ವಿಜಯಪುರ 45–34ರಿಂದ ಎಚ್‌ಬಿಆರ್‌ಬಿಎ ವಿರುದ್ಧ, ಡಿವೈಇಎಸ್‌ ಮಂಡ್ಯ 47–13ರಿಂದ ಡಾಮಿನೆಂಟ್ಸ್‌ ಚಿಕ್ಕಮಗಳೂರು ವಿರುದ್ಧ ಜಯ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.