ಬ್ಯಾಸ್ಕೆಟ್‌ಬಾಲ್‌: ಜೆಎಸ್‌ಸಿ ತಂಡ ಕ್ವಾರ್ಟರ್‌ಗೆ ಬೆಂಗಳೂರು: ಪ್ರಿಯಾಂಶು (20) ಮತ್ತು ದಿನೇಶ್ (19) ಅವರ ಆಟದ ಬಲದಿಂದ ಜೆಎಸ್‌ಸಿ ತಂಡದವರು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ 98–71ರಿಂದ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದರು. ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಮಂಗಳವಾರ ಪ್ರಿ ಕ್ವಾರ್ಟರ್‌ ಫೈನಲ್‌ ಹಂತದ ಪಂದ್ಯಗಳು ನಡೆದವು. ಇತರ ಪಂದ್ಯಗಳಲ್ಲಿ ಕೆಎಸ್‌ಪಿ 91–78ರಿಂದ ಎಚ್‌ಬಿಆರ್‌ ತಂಡವನ್ನು, ಯಂಗ್‌ ಓರಿಯನ್ಸ್‌ 63–43ರಿಂದ ವಿಬಿಸಿ ಮಂಡ್ಯ ತಂಡವನ್ನು, ಬ್ಯಾಂಕ್‌ ಆಫ್‌ ಬರೋಡಾ 95–51ರಿಂದ ಆರ್ಯನ್ಸ್‌ ಮೈಸೂರು ತಂಡವನ್ನು, ಸೌಥರ್ನ್ ಬ್ಲೂಸ್‌ 64–44ರಿಂದ ಸಹಕಾರನಗರ ತಂಡವನ್ನು, ಎಂಇಜಿ 80–45ರಿಂದ ವಿವೇಕ್ಸ್‌ ತಂಡವನ್ನು, ಬೀಗಲ್ಸ್‌ 84–72ರಿಂದ ಓರಿಯನ್ಸ್‌ ತಂಡವನ್ನು ಮಣಿಸಿತು. ಮಹಿಳೆಯರ ವಿಭಾಗ: ಮೌಂಟ್ಸ್‌ ಬಿ.ಸಿ 61–22ರಿಂದ ಎಂಎನ್‌ಕೆ ರಾವ್ ವಿರುದ್ಧ, ಡಿವೈಇಎಸ್‌ ಮೈಸೂರು 69–49ರಿಂದ ಬೆಂಗಳೂರು ವ್ಯಾನ್ಗಾರ್ಡ್ಸ್ ವಿರುದ್ಧ, ರಾಜ್‌ಮಹಲ್‌ 67–32ರಿಂದ ಬೆಂಗಳೂರು ಸ್ಪೋರ್ಟಿಂಗ್‌ ವಿರುದ್ಧ, ಕೆ.ಎಸ್‌. ಹೆಗ್ಡೆ 66–35ರಿಂದ ಹೆಬ್ಬಾಳ ವಿರುದ್ಧ, ಬೀಗಲ್ಸ್‌ 64–45ರಿಂದ ಡಿವೈಇಎಸ್‌ ವಿದ್ಯಾನಗರ ವಿರುದ್ಧ, ಸಿಜೆಸಿ 41–37ರಿಂದ ರೋವರ್ಸ್‌ ಧಾರವಾಡ ವಿರುದ್ಧ, ಮೌಂಟ್ಸ್‌ ಬಿ.ಸಿ. 61–29ರಿಂದ ಡಿವೈಇಎಸ್‌ ಮಂಡ್ಯ ವಿರುದ್ಧ ಗೆಲುವು ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.