ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ರಕ್ಷಿತ್‌, ಯಶಸ್ವಿನಿಗೆ ಪ್ರಶಸ್ತಿ ಬೆಂಗಳೂರು: ರಕ್ಷಿತ್ ಆರ್.ಬಿ ಮತ್ತು ಯಶಸ್ವಿನಿ ಡಿ. ಘೋರ್ಪಡೆ ಅವರು ಮಲ್ಲೇಶ್ವಂ ಅಸೋಸಿಯೇಷನ್‌ನಲ್ಲಿ ನಡೆಯುತ್ತಿರುವ ಸಿವಿಎಲ್‌ ಶಾಸ್ತ್ರಿ ಸ್ಮರಣಾರ್ಥ ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಗುರುವಾರ ನಡೆದ ಪುರುಷರ ಫೈನಲ್‌ನಲ್ಲಿ ರಕ್ಷಿತ್ 11-9, 11-5, 11-6, 11-9ರಿಂದ ಸೌಮ್ಯಾದ್ರಿ ಭಟ್ಟಾಚಾರ್ಯ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ರಕ್ಷಿತ್‌ ಅವರು 12-10, 4-11, 11-8, 15-17, 11-4, 9-11, 11-8ರಿಂದ ಪಿ. ಯಶವಂತ್‌ ವಿರುದ್ಧ; ಸೌಮ್ಯಾದ್ರಿ 5-11, 11-5, 11-8, 11-9, 11-9ರಿಂದ ವರುಣ್‌ ಬಿ. ಕಶ್ಯಪ್‌ ವಿರುದ್ಧ ಜಯ ಗಳಿಸಿದರು. ಮಹಿಳೆಯರ ಫೈನಲ್‌ನಲ್ಲಿ ಯಶಸ್ವಿನಿ 11-6, 9-11, 11-3, 11-13, 6-11, 11-7, 11-1ರಿಂದ ದೇಶ್ನಾ ಎಂ. ವಂಶಿಕಾ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಯಶಸ್ವಿನಿ 11-7, 11-8, 11-8, 11-2 ಅನರ್ಘ್ಯಾ ಮಂಜುನಾಥ್‌ ವಿರುದ್ಧ, ದೇಶ್ನಾ 11-8, 11-7, 11-6, 11-4 ವಿ. ಖುಷಿ ವಿರುದ್ಧ ಗೆಲುವು ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.