ಬೆಂಗಳೂರು | ಟೆನಿಸ್‌: ಜೈನ್‌ ವಿಶ್ವವಿದ್ಯಾಲಯ ತಂಡ ಚಾಂಪಿಯನ್‌ ‌‌ಬೆಂಗಳೂರು: ಇಲ್ಲಿನ ಜೈನ್‌ ವಿಶ್ವವಿದ್ಯಾಲಯ ತಂಡವು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕನಕಪುರದ ಜೈನ್‌ ಗ್ಲೋಬಲ್‌ ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಜೈನ್‌ ತಂಡವು 2–1ರಿಂದ ತಮಿಳುನಾಡಿನ ಯುನಿವರ್ಸಿಟಿ ಆಫ್‌ ಮದ್ರಾಸ್‌ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದಿತು. ಮದ್ರಾಸ್‌ ತಂಡ ರನ್ನರ್‌ ಅಪ್‌ ಆಯಿತು. ಸೆಮಿಫೈನಲ್‌ನಲ್ಲಿ ಜೈನ್‌ ತಂಡವು 2–1ರಿಂದ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಟೆಕ್ನಾಲಜಿ ವಿರುದ್ಧ; ಮದ್ರಾಸ್‌ ತಂಡವು 2–1ರಿಂದ ಅದೇ ರಾಜ್ಯದ ಉಸ್ಮಾನಿಯಾ ವಿಶ್ವವಿದ್ಯಾಲಯ ವಿರುದ್ಧ ಗೆಲುವು ಸಾಧಿಸಿತ್ತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಎಂ ತಂಡವು 2–0ಯಿಂದ ಉಸ್ಮಾನಿಯಾ ತಂಡವನ್ನು ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.