ಕ್ರಿಕೆಟ್‌: ಕ್ವಾರ್ಟರ್‌ಗೆ ಕರ್ನಾಟಕ ತಂಡ ಬೆಂಗಳೂರು: ಅನೀಶ್ವರ್ ಗೌತಮ್ ಮತ್ತು ಕೆ.ವಿ. ಅನೀಶ್‌ ಅವರ ಶತಕದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಪುರುಷರ ಏಕದಿನ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹರಿಯಾಣ ತಂಡವನ್ನು ಮಣಿಸಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ದೆಹಲಿಯ ಪಾಲಮ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 50 ಓವರ್‌ಗಳಲ್ಲಿ ಐದು ವಿಕೆಟ್‌ಗೆ 343 ರನ್‌ ಗಳಿಸಿತು. ಅನೀಶ್‌ 107 (101ಎ, 7x4, 4x6), ಅನೀಶ್ವರ್‌ ಔಟಾಗದೆ 125 (109ಎ, 8x4, 5x6) ಗಳಿಸಿ ತಂಡಕ್ಕೆ ಆಸರೆಯಾದರು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಹರಿಯಾಣ ತಂಡ 46 ಓವರ್‌ಗಳಲ್ಲಿ 264 ರನ್‌ಗೆ ಅಲೌಟಾಯಿತು. ಯುವರಾಜ್‌ ಸಿಂಗ್‌ 101 (97ಎ, 8x4, 1x6) ಏಕಾಂಗಿ ಹೋರಾಟ ನಡೆಸಿದರು. 79 ರನ್‌ಗಳಿಂದ ಕರ್ನಾಟಕ ತಂಡ ಗೆಲುವು ಸಾಧಿಸಿತು. ಇದೇ 19ರಂದು ನವದೆಹಲಿಯಲ್ಲಿ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡವು ಮುಂಬೈ ತಂಡವನ್ನು ಎದುರಿಸಲಿದೆ. ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 343 (ಮ್ಯಾಕ್ನಿಲ್ ಹ್ಯಾಡ್ಲಿ ನೊರೊನ್ಹಾ 46, ಅನೀಶ್‌ ಕೆ.ವಿ. 107, ಅನೀಶ್ವರ್‌ ಗೌತಮ್‌ ಔಟಾಗದೆ 125, ಆರ್‌.ಸ್ಮರಣ್‌ 42; ಸಮಂತ್ ಜಖರ್ 78ಕ್ಕೆ 3, ನಿಶಾಂತ್‌ ಸಿಂಧು 61ಕ್ಕೆ 2): ಹರಿಯಾಣ: 46 ಓವರ್‌ಗಳಲ್ಲಿ 264 (ಯುವರಾಜ್‌ ಸಿಂಗ್‌ 101, ಮಯಾಂಕ್‌ ಶಾಂಡಿಲ್ವ 45, ಸರ್ವೇಶ್‌ ರೋಹಿಲ್ಲಾ; ಯಶೋವರ್ಧನ್‌ ಪರಂತಾಪ್‌ 24ಕ್ಕೆ 2, ಎ.ಸಿ. ರೋಹಿತ್‌ ಕುಮಾರ್‌ 54ಕ್ಕೆ 3) ಫಲಿತಾಂಶ: ಕರ್ನಾಟಕ ತಂಡಕ್ಕೆ 79 ರನ್‌ ಜಯ, ಕ್ವಾರ್ಟರ್‌ ಫೈನಲ್‌ ಪ್ರವೇಶ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.