ಚೀನಾ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್‌– ಚಿರಾಗ್ ಶೆಟ್ಟಿಗೆ ರನ್ನರ್‌ ಅಪ್‌ ಸ್ಥಾನ ಶೆನ್‌ಝೆನ್‌ (ಚೀನಾ): ಭಾರತದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್‌ ಫೈನಲ್‌ನಲ್ಲಿ ಭಾನುವಾರ ಚೀನಾದ ಲಿಯಾಂಗ್ ವೀ ಕೆಂಗ್– ವಾಂಗ್‌ ಚಾಂಗ್‌ ಜೋಡಿ ಎದುರು ತೀವ್ರ ಹೋರಾಟದ ನಂತರ ಸೋಲನುಭವಿಸಿದರು. ಹ್ವಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದ ಭಾರತದ ಆಟಗಾರರು 19–21, 21–18, 19–21ರಲ್ಲಿ ವಿಶ್ವದ ಅಗ್ರ ಕ್ರಮಾಂಕದ ಜೋಡಿಯಾದ ಲಿಯಾಂಗ್‌– ವಾಂಗ್ ಎದುರು ಪರಾಜಿತರಾದರು. ಆದರೆ ಒಂದು ಗಂಟೆ 11 ನಿಮಿಷಗಳ ಪಂದ್ಯ ಹೋರಾಟದಿಂದ ಕೂಡಿತ್ತು. ಈ ಪ್ರಶಸ್ತಿ ಗೆದ್ದರೆ ವರ್ಷದ ಎರಡನೇ ಬಿಡಬ್ಲ್ಯುಎಫ್‌ ಸೂಪರ್ 750 ಸರಣಿಯಲ್ಲಿ ಗೆಲುವನ್ನು ಪಡೆದಂತೆ ಆಗುತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.