| ಯು.ಪಿ. ಯೋಧಾಸ್ ತಂಡಕ್ಕೆ ನರ್ವಾಲ್ ನಾಯಕ ನವದೆಹಲಿ: ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿರುವ ಪ್ರದೀಪ್ ನರ್ವಾಲ್ ಅವರು ಡಿಸೆಂಬರ್‌ 2ರಂದು ಆರಂಭವಾಗುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು.ಪಿ ಯೋಧಾಸ್‌ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಂಡದ ಫ್ರಾಂಚೈಸಿ ಭಾನುವಾರ ತಿಳಿಸಿದೆ. ಪಿಕೆಎಲ್‌ನ ರೇಡಿಂಗ್‌ನಲ್ಲಿ ಅತ್ಯಧಿಕ ಪಾಯಿಂಟ್ಸ್‌ಗಳ (1,500ಕ್ಕೂ ಹೆಚ್ಚು) ದಾಖಲೆ ಹೊಂದಿರುವ ನರ್ವಾಲ್ ಅವರು ಪಟ್ನಾ ತಂಡ ಸತತ ಮೂರು ಸಲ (2016 ರಿಂದ 2018) ಚಾಂಪಿಯನ್‌ ಆದಾಗ ನಾಯಕರಾಗಿದ್ದರು. 2018ರ ಏಷ್ಯನ್ ಗೇಮ್ಸ್‌ ಕಂಚಿನ ಪದಕ ಗೆದ್ದ ತಂಡದಲ್ಲಿ ಆಡಿದ್ದರು. ‘ನನ್ನ ಹೆಗಲ ಮೇಲೆ ದೊಡ್ಡ ಹೊಣೆ ವಹಿಸಿದ್ದಾರೆ. ಇದನ್ನು ಸಾಧಿಸಲು ಸರ್ವ ಪ್ರಯತ್ನ ಮಾಡುತ್ತೇನೆ’ ಎಂದು ನರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯುಪಿ ಯೋಧಾಸ್ ತಂಡ ಡಿ.2ರಂದು ಆರಂಭವಾಗುವ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಎದುರಿಸಲಿದೆ. 2017ರಲ್ಲಿ ಪಿಕೆಎಲ್‌ನಲ್ಲಿ ಮೊದಲ ಬಾರಿ ಆಡಿರುವ ಯುಪಿ ಯೋಧಾಸ್‌ ಪ್ಲೇಆಫ್‌ ಹಂತದಿಂದ ಮೇಲಕ್ಕೇರಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.