ಬ್ಯಾಡ್ಮಿಂಟನ್: ಪ್ರಿಯಾಂಶು ರಾಜಾವತ್‌ ಸೆಮಿಫೈನಲ್‌ಗೆ ಲಖನೌ: ಭಾರತದ ಯುವ ಆಟಗಾರ ಪ್ರಿಯಾಂಶು ರಾಜಾವತ್‌, ಸೈಯ್ಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಇಂಡೊನೇಷ್ಯಾದ ಅಲ್ವಿ ಫರ್ಹಾನ್ ಅವರನ್ನು ಸೋಲಿಸಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು. ಮಧ್ಯಪ್ರದೇಶದ 21 ವರ್ಷದ ಆಟಗಾರ ಪ್ರಿಯಾಂಶು ಕ್ವಾರ್ಟರ್‌ಫೈನಲ್‌ನಲ್ಲಿ 21–15, 21–16 ರಿಂದ ಪರ್ಹಾನ್ ಮೇಲೆ ಗೆಲುವನ್ನು ದಾಖಲಿಸಿದರು. ಗೆಲುವಿಗೆ ಅವರು 49 ನಿಮಿಷ ತೆಗೆದುಕೊಂಡರು. ಬಿಡಬ್ಲ್ಯುಎಫ್‌ ವಿಶ್ವ ಟೂರ್ ಸೂಪರ್‌ 300 ಮಟ್ಟದ ಈ ಟೂರ್ನಿ ಯಲ್ಲಿ ಪ್ರಿಯಾಂಶು ತಮ್ಮ ಮುಂದಿನ ಪಂದ್ಯದಲ್ಲಿ ಚೀನಾ ತೈಪೆಯ ಚೀ ಯು ಜೆನ್ ಅವರನ್ನು ಎದುರಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.