ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ |ಅಥ್ಲೀಟ್‌ಗಳಿಗೆ ಸೇನಾ ತರಬೇತಿ: ಜನರಿಂದ ಟೀಕೆ ಸೋಲ್, ದಕ್ಷಿಣ ಕೊರಿಯಾ: ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಹೆಚ್ಚು ಪದಕಗಳನ್ನು ಜಯಿಸುವದರತ್ತ ಕಣ್ಣಿಟ್ಟಿರುವ ದಕ್ಷಿಣ ಕೊರಿಯಾ ವಿನೂತನವಾದ ಕ್ರಮಕ್ಕೆ ಮುಂದಾಗಿದೆ. ದಕ್ಷಿಣ ಆಫ್ರಿಕಾ ಒಲಿಂಪಿಕ್ ಸಮಿತಿಯು ತನ್ನ ದೇಶದ ನೂರು ಅಥ್ಲೀಟ್‌ಗಳನ್ನು ಸೇನಾ ತರಬೇತಿಗಾಗಿ ಕಳಿಸಲು ಉದ್ದೇಶಿಸಿದೆ. ಸಮಿತಿಯ ಈ ನಡೆಗೆ ‘ಹಳೆಯ ಮಾದರಿ ಮತ್ತು ಪ್ರತಿಗಾಮಿ’ ಎಂಬ ಟೀಕೆಗಳು ವ್ಯಕ್ತವಾಗಿವೆ. ಮಾನಸಿಕವಾಗಿ ಕಠಿಣವಾಗಲಿ ಎಂಬ ಉದ್ದೇಶ ಈ ತರಬೇತಿಯ ಹಿಂದೆ ಎಂದು ಸಮಿತಿಯ ಮೂಲಗಳೂ ಹೇಳಿವೆ. ಕೊರಿಯನ್ ಸ್ಪೋರ್ಟ್ಸ್ ಮತ್ತು ಒಲಿಂಪಿಕ್ ಕಮಿಟಿಯು ಕಳೆದ ವಾರ ತನ್ನ ಸ್ಥಳೀಐ ಸಂಘಟನೆಗಳಿಗೆ ಸೂಚನೆ ನೀಡಿದೆ. ಅಥ್ಲೀಟ್‌ಗಳನ್ನು ಕೊರಿಯಾ ಮರೈನ್ ಕೋರ್‌ ಕ್ಯಾಂಪ್‌ಗೆ ಕಳಿಸಲು ತಿಳಿಸಿದೆ. ಪೊಹಾಂಗ್‌ನಲ್ಲಿ ಇರುವ ಈ ಕ್ಯಾಂಪ್‌ನಲ್ಲಿ ಮೂರು ದಿನ ತರಬೇತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಪುರುಷ ಮತ್ತು ಮಹಿಳಾ ವಿಭಾಗದ ಒಟ್ಟು 320 ಅಥ್ಲೀಟ್‌ಗಳು ಈ ಕ್ಯಾಂಪ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಚೀನಾದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ ಸಂದರ್ಭದಲ್ಲಿಯೇ ದಕ್ಷಿಣ ಕೊರಿಯ ಸಮಿತಿಯ ಅಧಿಕಾರಿಗಳು ಈ ತರಬೇತಿಯ ಬಗ್ಗೆ ಯೋಜಿಸಿದ್ದರು ಎನ್ನಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಪಾರ ಟೀಕೆಗಳು ವ್ಯಕ್ತವಾಗಿವೆ. ‘ನಾವಿನ್ನೂ ಸೇನಾ ಆಡಳಿತದಲ್ಲಿ ಇದ್ದೇವೆಯೇ? ಇದು ಹಾಸ್ಯಾಸ್ಪದ’ ಎಂದೂ ಟೀಕಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.