ಬ್ಯಾಡ್ಮಿಂಟನ್‌: ಅಶ್ವಿನಿ– ತನೀಶಾ ಜೋಡಿ ರನ್ನರ್‌ ಅಪ್‌ ಲಖನೌ: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನೀಶಾ ಕ್ರಾಸ್ಟೊ ಅವರು ಭಾನುವಾರ ಇಲ್ಲಿ ನಡೆದ ಸಯ್ಯದ್‌ ಮೋದಿ ಅಂತರರಾಷ್ಟ್ರೀಯ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನ ಫೈನಲ್‌ ಪಂದ್ಯದಲ್ಲಿ ಪರಾಭವಗೊಂಡು, ರನ್ನರ್‌ ಅಪ್‌ ಸ್ಥಾನ ‍ಪಡೆದರು. ವಿಶ್ವ 32ನೇ ಕ್ರಮಾಂಕದ ಭಾರತದ ಜೋಡಿಯು 14–21, 21–17, 15–21ರಿಂದ ಮೂರನೇ ಶ್ರೇಯಾಂಕದ ಜಪಾನ್‌ನ ರಿನ್ ಇವಾನಾಗ ಮತ್ತು ಕೀ ನಕಾನಿಶಿ ಅವರಿಗೆ ಮಣಿದರು. 7ನೇ ಶ್ರೇಯಾಂಕ ಹೊಂದಿದ್ದ ಭಾರತದ ಆಟಗಾರ್ತಿಯರು 77 ನಿಮಿಷದಲ್ಲಿ ಸೋಲುಪ್ಪಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.