ಚೆಸ್‌: ಲೀಡ್‌ನಲ್ಲಿ ಗುಕೇಶ್, ಹರಿಕೃಷ್ಣ ಚೆನ್ನೈ: ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಸೋಮವಾರ ಸರ್ಬಿಯಾದ ಅಲೆಕ್ಸಾಂಡರ್‌ ಪ್ರೆಡ್ಕೆ ಅವರನ್ನು ಸೋಲಿಸಿದರು. 44 ನಡೆಗಳಲ್ಲಿ ಗಳಿಸಿದ ಈ ಗೆಲುವಿನಿಂದ ಅವರು ಸ್ವದೇಶದ ಪಿ.ಹರಿಕೃಷ್ಣ ಅವರೊಡನೆ ಅಗ್ರಸ್ಥಾನಕ್ಕೇರಿದರು. 17 ವರ್ಷದ ಗುಕೇಶ್ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಅವರು ಆಡಿದ ಮೊದಲ ಮೂರು ಪಂದ್ಯಗಳು ಡ್ರಾ ಆಗಿದ್ದವು. ಹರಿಕೃಷ್ಣ ನಾಲ್ಕನೇ ಸುತ್ತಿನಲ್ಲಿ ಉಕ್ರೇನ್‌ನ ಪಾವೆಲ್‌ ಎಲ್ಯಾನೋವ್ ಅವರ ಜೊತೆ ಡ್ರಾ ಮಾಡಿಕೊಂಡರು. ‌ಅರ್ಜುನ್ ಇರಿಗೇಶಿ ಕಪ್ಪು ಕಾಯಿಗಳಲ್ಲಿ ಆಡಿ ಅಮೆರಿಕದ ಲೆವೊನ್ ಅರೋನಿಯನ್ ಜೊತೆ 41 ನಡೆಗಳಲ್ಲಿ ಡ್ರಾ ಸಾಧಿಸಿದರು. ಇರಾನ್‌ನ ಪರ್ಹಾಮ್ ಮಘ್‌ಸೂಡ್ಲು (2 ಪಾಯಿಂಟ್‌), ತಮ್ಮ ಮೊದಲ ಜಯ ದಾಖಲಿಸಿದರು. ಅವರು 34 ನಡೆಗಳಲ್ಲಿ ಸನನ್ ಸ್ಯುಗಿರೊವ್ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.